ಭುವನೇಶ್ವರ: ವಿಧಾನ ಸಭೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಎದುರಿಸುತ್ತಿರುವ ಒರಿಸ್ಸಾ ವಿಧಾನಸಭೆಯ ಮಾಜಿ ಸಭಾಪತಿ ಮಹೇಶ್ವರ ಮೊಹಾಂತಿ ಅವರ ತನಿಖೆ ನಡೆಸಲು ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ವಿಧಾನಸಭೆಯ ಐವರು ಸಿಂಬ್ಬಂದಿಗಳ ಹೆಳಿಕೆಯನ್ನು ದಾಖಲಿಸಿಕೊಂಡ ಒಂದು ವಾರದ ಬಳಿಕ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಮೊಹಾಂತಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಇದ್ದಿರದ ಕಾರಣ ನೋಟೀಸ್ ಅನ್ನು ಅವರ ಸಿಬಂದಿ ಕೈಯಲ್ಲಿ ನೀಡಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿಧಾನ ಸಭೆಯ ಮಹಿಳಾ ಸಿಬಂದಿ ಗಾಯತ್ರಿ ಪಾಂಡೆ ಎಂಬುವರು, ಮೋಹಾಂತಿ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿರುವ ಬಳಿಕ ಮೋಹಾಂತಿ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮೋಹಾಂತಿ ವಿರುದ್ಧ ಲೈಂಗಿಕ ಪ್ರಕರಣ ದಾಖಲಿಸಿರುವ ಪೊಲೀಸರು ಶುಕ್ರವಾರದಂದು ಅವರ ವಿಚಾರಣೆ ನಡೆಸಲಿದ್ದಾರೆಂಬ ನಿರೀಕ್ಷೆ ದಟ್ಟವಾಗಿದ್ದರೂ ಈ ಕುರಿತು ಮಾಹಿತಿ ನೀಡಲು ಅಧಿಕಾರಿ ನಿರಾಕರಿಸಿದ್ದಾರೆ.
ಈ ವಿಚಾರವಾಗಿ ತಾವು ಈ ಪ್ರಕರಣದ ಉಸ್ತುವಾರಿ ವಹಿಸಿಕೊಂಡಿದ್ದರೂ, ಮೋಹಾಂತಿ ಅವರನ್ನು ಮಹಿಳಾ ಠಾಣ ಇನ್‌ಸ್ಪೆಕ್ಟರ್ ಬಿಲಾಸೈನಿ ನಾಯಕ್ ವಿಚಾರಣೆ ಮಾಡಲಿದ್ದಾರೆ ಎಂದು ಡಿಸಿಪಿ ಅಮಿತಾಬ್ ಠಾಕುರ್ ತಿಳಿಸಿದ್ದಾರೆ.
ಪೊಲೀಸರ ತಂಡವೊಂದು ಮೊಹಂತಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ವಿಚಾರಣೆ ಮಾಡಲಿದ್ದು, ಅವರ ಚಾಲಕ ಸೇರಿದಂತೆ ಇತರ ಐವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆ ಬರಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಪೊಲೀಸರು ಲೈಂಗಿಕ ಕಿರುಕುಳಕ್ಕೆ ಒಳಗಾದ ದೂರುನೀಡಿರುವ ಗಾಯತ್ರಿಯವರ ಹೇಳಿಕೆಯನ್ನು ಪೊಲೀಸರು, ಕಟಕ್ ಸಮೀಪದ ಕುಹುಂದ ಎಂಬ ಗಾಯತ್ರಿಯವರ ಊರಿನಲ್ಲಿ ದಾಖಲಿಸಿಕೊಂಡಿದ್ದಾರೆ.
|