ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಧೀಶರ ವರ್ಗಾವಣೆಗೆ ವಕೀಲರ ವಿರೋಧ
ಬಾಂಬೆ ಹೈಕೋರ್ಟ್‌ಗೆ ಇತರೇ ಹೈಕೋರ್ಟ್‌ನ ನ್ಯಾಯಾಧಿಶರನ್ನು ವರ್ಗಾವಣೆ ಮಾಡುವ ನೀತಿಯನ್ನು ವಿರೋಧಿಸುವುದಾಗಿ ಪಶ್ಚಿಮ ಭಾರತ ವಕೀಲರ ಸಂಘವು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್‌ರಿಗೆ ಸಂದೇಶ ನೀಡಿದೆ.

ಬಾಂಬೆ ಹೈಕೋರ್ಟ್‌‌ಗೆ ಹೊರ ರಾಜ್ಯಗಳಿಂದ ವಕೀಲರನ್ನು ವರ್ಗಾವಣೆ ಮಾಡುವ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿರುವ ಮನವಿಗೆ ಸುಮಾರು 70 ವಕೀಲರು ಸಹಿ ಹಾಕಿದ್ದಾರೆ.

ಈ ಮನವಿಪತ್ರಕ್ಕೆ ಪತ್ರಕ್ಕೆ ಮಾಜೀ ಅಡ್ವೋಕೇಟ್ ಜನರಲ್ ಸಿ.ಜೆ. ಸಾವಂತ್, ಮಾಜೀ ಅಡಿಷನಲ್ ಸಾಲಿಸಿಟರ್ ಜನರಲ್ ಸಿರೀಶ್ ಗುಪ್ತಾ ಮತ್ತು ಹಿರಿಯ ನ್ಯಾಯವಾದಿ ಎಸ್.ಆರ್.ಚಿತ್ನಿಸ್‌ರಂತಹ ಪ್ರಸಿದ್ದ ವಕೀಲರು ಸಹಿಹಾಕಿದ್ದಾರೆ.

ನ್ಯಾಯಾಧೀಶರನ್ನು ವರ್ಗಾವಣೆ ಮಾಡುವುದರಿಂದ ನ್ಯಾಯಕ್ಕೆ, ಹೈಕೋರ್ಟ್‌ನ ಆಡಳಿತ ವ್ಯವಸ್ಥೆಗೆ ಮತ್ತು ಕೆಳ ನ್ಯಾಯಾಲದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅನುಭವವಾಗಿದೆ. ಇದು ಮಹಾರಾಷ್ಟ್ರ ಮತ್ತು ಗೋವಾಗಳ ದಾವೇದಾರರ ಹಿತಾಸಕ್ತಿಗೆ ವಿರುದ್ದವಾಗಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಮತ್ತಷ್ಟು
ಒರಿಸ್ಸಾ ಮಾಜೀ ಸ್ಪೀಕರ್ ವಿಚಾರಣೆ
ಮುಂಬೈಯಲ್ಲಿ ಐವತ್ತಕ್ಕೂ ಮಿಕ್ಕು ಟಿಬೆಟಿಯನ್ನರ ಬಂಧನ
ಮೆಘಾಲಯ, ಅಸ್ಸಾಂನಲ್ಲಿ ಲಘು ಭೂಕಂಪ
ಪಾಕ್ ಜೈಲಿನಲ್ಲಿ 641 ಭಾರತೀಯರು
ಶೇ.7.14ಕ್ಕೆ ಇಳಿದ ಹಣದುಬ್ಬರ: 0.27 ಇಳಿಕೆ
ಒಲಂಪಿಕ್ ಜ್ಯೋತಿ: ಭದ್ರಕೋಟೆಯಾದ ದೆಹಲಿ