ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮಿಳು ನಾಡಿನತ್ತ ನಕ್ಸಲರ ವಲಸೆ!
ಮಧ್ಯ ಭಾರತದಲ್ಲಿ ಬೇರು ಬಿಟ್ಟಿರುವ ನಕ್ಸಲರನ್ನು ಹೊರದಬ್ಬುವ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿರುವ ಕಾರಣ, ನೆಲೆ ಇಲ್ಲದ ನಕ್ಸಲ ವಾದಿಗಳು ಸುರಕ್ಷಿತ ತಾಣ ಹುಡುಕಿಕೊಂಡು ಪಶ್ಚಿಮ ಘಟ್ಟಗಳತ್ತ ವಲಸೆ ತೆರಳುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯ ಮೂಲಗಳು ಹೇಳಿವೆ.

ಜಾರ್ಖಂಡ, ಓರಿಸ್ಸಾ, ಚತ್ತಿಸಗಢ್ ಮತ್ತು ಆಂಧ್ರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾವೋವಾದಿಗಳು ತಮಿಳುನಾಡಿನ ಗುಡ್ಡಗಾಡು ಜಿಲ್ಲೆಗಳಾದ ಥೇಣಿ, ದಿಂಡಿಗಲ್, ಮತ್ತು ಕೊಡೈಕನಾಲ್ ಜಿಲ್ಲೆಗಳತ್ತ ವಲಸೆ ಬಂದಿದ್ದಾರೆ ಎನ್ನುವುದು ಖಚಿತವಾಗಿದ್ದು. ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ತಮಿಳುನಾಡು ಸರಕಾರವು ಮಾವೋವಾದಿಗಳ ವಿರುದ್ಧ ಕಠಿಣ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ.

ಹಿಂದಿ ಮತ್ತು ತೆಲುಗು ಮಾತನಾಡುವ ಮಾವೋವಾದಿಗಳು ಬೀದಿ ವ್ಯಾಪಾರಿಗಳ ಸೋಗಿನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ತಮಿಳುನಾಡಿಗೆ ಆಗಮಿಸಿದ್ದು. ಸ್ಥಳೀಯ ನಾಗರಿಕರೊಂದಿಗೆ ಸಂಪರ್ಕ ಬೆಳೆಸುವಲ್ಲಿ ಸಫಲರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಅರೆಸೇನಾ ಪಡೆ ಮತ್ತು ಪೊಲೀಸರ ಗುಂಡಿಗೆ 45 ಮಾವೋವಾದಿಗಳು ಬಲಿಯಾಗಿದ್ದಾರೆ ಎಂದು ತಿಳಿಸಿವೆ.

ದಕ್ಷಿಣಕ್ಕೆ ಬಂದಿರುವ ಮಹಿಳಾ ಮಾವೋವಾದಿಗಳು ಬುಡಕಟ್ಟು ಜನಾಂಗ ವಾಸಿಸುವ ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮ ಪ್ರಚಾರವನ್ನು ಈಗಾಗಲೇ ಪ್ರಾರಂಭಿಸಿದ್ದು. ದಕ್ಷಿಣದ ರಾಜ್ಯಗಳಲ್ಲಿ ಮಾವೋವಾದಿಗಳಿಗೆ ರಾಜ್ಯ ಸರಕಾರಗಳ ವಿರೋಧ ಉತ್ತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕಡಿಮೆ ಇದೆ.

ಬುಡಕಟ್ಟು ಜನಾಂಗದವರು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕಾರಣ ಮಾವೋವಾದಿಗಳ ಆಮೀಷಕ್ಕೆ ಸುಲಭವಾಗಿ ಬಲಿಯಾಗಬಹುದು. ನಕ್ಸಲ್ ವಾದಿಗಳ ಮಹಿಳಾ ವಿಭಾಗವು ಬುಡಕಟ್ಟು ಜನಾಂಗದ ಯುವಕರಿಗೆ ಕರಾಟೆ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕಾಡುಗಳ್ಳ ವೀರಪ್ಪನ್‌ನ್ನು ಮಟ್ಟ ಹಾಕುವಲ್ಲಿ ಆಪರೇಷನ್ ಕುಕೂನ್ ಜಾಲ ಹೆಣೆದು ವಿರಪ್ಪನ್ ಸಾವಿಗೆ ಕಾರಣರಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ. ವಿಜಯಕುಮಾರ್ ಅವರು ನಕ್ಸಲ್‌ವಾದಿಗಳು ಚುರುಕಾಗಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಿ ನಕ್ಸಲ್ ಚಟುವಟಿಕೆಗೆ ಅಂತ್ಯ ಹೇಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಇಂದು ಲೈಂಗಿಕ ಕಿರುಕುಳ ನೀಡಿದ ಸ್ಪೀಕರ ವಿಚಾರಣೆ
ನ್ಯಾಯಾಧೀಶರ ವರ್ಗಾವಣೆಗೆ ವಕೀಲರ ವಿರೋಧ
ಒರಿಸ್ಸಾ ಮಾಜೀ ಸ್ಪೀಕರ್ ವಿಚಾರಣೆ
ಮುಂಬೈಯಲ್ಲಿ ಐವತ್ತಕ್ಕೂ ಮಿಕ್ಕು ಟಿಬೆಟಿಯನ್ನರ ಬಂಧನ
ಮೆಘಾಲಯ, ಅಸ್ಸಾಂನಲ್ಲಿ ಲಘು ಭೂಕಂಪ
ಪಾಕ್ ಜೈಲಿನಲ್ಲಿ 641 ಭಾರತೀಯರು