ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಿಸಿ ಮೀಸಲಾತಿ: ಕೆನಪದರಕ್ಕೆ ಸರಕಾರದ ಖೋಕ್
ಇತರೆ ಹಿಂದುಳಿದ ವರ್ಗಗಳ ಹಿನ್ನೆಲೆ ಹೊಂದಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದವರಿಗೆ (ಕೆನೆ ಪದರ) ಉನ್ನತ ಶಿಕ್ಷಣದಲ್ಲಿ ಮೀಸಲಾತಿಯ ಸೌಲಭ್ಯ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ.

ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ತೆಗೆದುಕೊಂಡ ತೀರ್ಮಾನದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸರ್ವೋಚ್ಚ ನ್ಯಾಯಾಲಯ ನೀಡಿರುವ ಸಲಹೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಮಾಹಿತಿ ನೀಡಿದರು.

ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ಮತ್ತು ಉದ್ಯೋಗ ಮೀಸಲಾತಿಗಳ ಕುರಿತು ಸರಕಾರ ಸ್ಪಷ್ಟ ಪರಿಕಲ್ಪನೆಯನ್ನು ಹೊಂದಿದ್ದು. ಕೆನೆಪದರ ಪರಿಕಲ್ಪನೆಯು ಕೇವಲ ಉದ್ಯೋಗ ಮೀಸಲಾತಿಗೆ ಸೂಕ್ತವಾದದ್ದು. ಸಂವಿಧಾನದ 93ನೇ ತಿದ್ದುಪಡಿ ಅನ್ವಯ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ಸೌಲಭ್ಯವು ಕೆನೆ ಪದರ ಸೇರಿದಂತೆ ಇತರೆ ಹಿಂದುಳಿದ ಎಲ್ಲ ವರ್ಗಗಳಿಗೆ ದೊರೆಯಬೇಕು ಎಂದು ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ಮಾತ್ರ ಉನ್ನತ ಶಿಕ್ಷಣದಲ್ಲಿ ಇತರೆ ಹಿಂದುಳಿದ ವರ್ಗಗಳ ಕೆನೆ ಪದರಕ್ಕೆ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ತಳೆದಿರುವ ನಿಲುವಿನ ಅನುಸಾರವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಐಐಎಂ ಸೇರಿದಂತೆ ಇತರ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಮೀಸಲಾತಿ ಜಾರಿ ಮಾಡುವ ಕುರಿತು ಮಾತುಕತೆ ನಡೆಸಲಿದೆ. ಪ್ರಸಕ್ತ ಸಾಲಿನಲ್ಲಿ ನೀತಿಯ ಜಾರಿಯಾಗುವ ಸಾಧ್ಯತೆ ಇರುವ ಕಾರಣ ಐಐಎಂ ಶಿಕ್ಷಣ ಸಂಸ್ಥೆಗಳು ತಮ್ಮ ಶೈಕ್ಷಣಿಕ ಪ್ರವೇಶ ಪ್ರಕ್ರಿಯಯನ್ನು ಸ್ಥಗಿತಗೊಳಿಸಿವೆ.
ಮತ್ತಷ್ಟು
ತಮಿಳು ನಾಡಿನತ್ತ ನಕ್ಸಲರ ವಲಸೆ!
ಇಂದು ಲೈಂಗಿಕ ಕಿರುಕುಳ ನೀಡಿದ ಸ್ಪೀಕರ ವಿಚಾರಣೆ
ನ್ಯಾಯಾಧೀಶರ ವರ್ಗಾವಣೆಗೆ ವಕೀಲರ ವಿರೋಧ
ಒರಿಸ್ಸಾ ಮಾಜೀ ಸ್ಪೀಕರ್ ವಿಚಾರಣೆ
ಮುಂಬೈಯಲ್ಲಿ ಐವತ್ತಕ್ಕೂ ಮಿಕ್ಕು ಟಿಬೆಟಿಯನ್ನರ ಬಂಧನ
ಮೆಘಾಲಯ, ಅಸ್ಸಾಂನಲ್ಲಿ ಲಘು ಭೂಕಂಪ