ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಎಡಪಕ್ಷಗಳ ಸಮಿತಿ ಮೇ5ರಂದು ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಂಗಸಚಿವ ಪ್ರಣಬ್ ಮುಖರ್ಜಿ ಹಾಗೂ ಎಡಪಕ್ಷಗಳ ನಾಯಕರ ಸಭೆಯ ನಂತರ ಸಮಿತಿ ಸಭೆಯ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಯುಪಿಎ ಹಾಗೂ ಎಡಪಕ್ಷಗಳ ಸಮಿತಿ ಕಳೆದ ಮಾರ್ಚ್ 17ರಂದು ಸಭೆ ಸೇರಿ ಒಪ್ಪಂದದ ಕುರಿತಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಚರ್ಚಿಸಲಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಅಣು ಒಪ್ಪಂದ ವಿವಾದದ ಹಿನ್ನೆಲೆಯಲ್ಲಿ ಸರಕಾರ ಹಾಗೂ ಎಡಪಕ್ಷಗಳ ಸಮನ್ವಯ ಸಮಿತಿಯನ್ನು ರಚಿಸಿ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ರಚಿಸಲಾಗಿತ್ತು. ಅಣು ಒಪ್ಪಂದಕ್ಕೆ ಸಹಿ ಹಾಕಬೇಕಾದಲ್ಲಿ ಸುರಕ್ಷಾ ಕ್ರಮಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲಾಗಿತ್ತು
ಕಳೆದ ಬಾರಿಯ ಸಮಿತಿ ಸಭೆಯಲ್ಲಿ ಅಣು ಒಪ್ಪಂದ ಕುರಿತಂತೆ ಅಧ್ಯಯನ ನಡೆಸಿ ಮುಂಬರುವ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಸಿಪಿಐ ಹೇಳಿಕೆ ನೀಡಿತ್ತು.
|