ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೌಟುಂಬಿಕ ನ್ಯಾಯಾಲಯ ಸ್ಥಾಪನೆಗೆ ಕೇಂದ್ರ
ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಯಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳಲ್ಲಿ ಕೇಂದ್ರ ಸರಕಾರವೇ ಖುದ್ದಾಗಿ ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಗೆ ಮುಂದಾಗಲಿದೆ ಎಂದು ಪ್ರಧಾನಿ ಮನ್‌ಮೋಹನ್ ಸಿಂಗ್ ಪ್ರಕಟಿಸಿದ್ದಾರೆ.

ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಯ ವಿಚಾರದಲ್ಲಿ ಹಲವಾರು ರಾಜ್ಯಗಳು ವಿಫಲಗೊಂಡಿವೆ ಎಂದು ಟೀಕಿಸಿದ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಾಗಿ ಕೌಟುಂಬಿಕ ಕಲಹಗಳಿಂದ ಬಳಲುತ್ತಿದ್ದು, ಅಲ್ಲದೇ ಇದೇ ವರ್ಗ ಹೆಚ್ಚಾಗಿ ಕೌಟುಂಬಿಕ ನ್ಯಾಯಾಲಯಗಳಿಗೆ ವ್ಯಾಜ್ಯ ಪರಿಹಾರಕ್ಕೆ ಮೋರೆ ಹೋಗುತ್ತಿದೆ.

ತಮ್ಮ ದೂರುಗಳ ಪರಿಹಾರಕ್ಕೆ ಸಾಕಷ್ಟು ದೂರ ಪ್ರಯಾಣಿಸಬೇಕಿರುವುದರಿಂದ ದುರ್ಬಲವರ್ಗದ ಮಹಿಳೆಯರು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಾಧೀಶರುಗಳ ವಿಚಾರ ಸಂಕೀರ್ಣದಲ್ಲಿ ಅನಿಸಿಕೆ ವ್ಯಕ್ತಪಡಿಸಿದರು.

ಸಂಸತ್ತು ಜಾರಿಗೆ ತಂದಿರುವ ಕಾನೂನುಗಳ ಪರಿಣಾಮಕಾರಿ ಜಾರಿಗೆ ಸಂವಿಧಾನದ ಕಲಂ 247ರ ಅಡಿಯಲ್ಲಿ ಹೆಚ್ಚಿನ ನ್ಯಾಯಾಲಯಗಳನ್ನು ಕೇಂದ್ರ ಸ್ಥಾಪಿಸಬಹದು. ಸಮಾಜ ಕಲ್ಯಾಣದ ವಿಭಾಗದಲ್ಲಿ 1984ರ ಕೌಟುಂಬಿಕ ನ್ಯಾಯಾಲಯ ಕಾನೂನು ಬರುವುದರಿಂದ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಅಧಿಕಾರ ವ್ಯಾಪ್ತಿಯಲ್ಲಿ ಮದ್ಯ ಪ್ರವೇಶಿಸಬಹುದು ಎಂದು ಹೇಳಿದರು.
ಮತ್ತಷ್ಟು
ಗಂಡಾಂತರ ತರುವ ಆಕ್ರಮ ಬಾಂಗ್ಲಾ ವಲಸಿಗರು
ಸರಭಜೀತ್ ಗಲ್ಲು ಮುಂದೂಡಿಕೆ
ಸೆಷೆನ್ಸ್ ನ್ಯಾಯಾಧೀಶರ ಆತ್ಮಹತ್ಯೆ
ಅಣು ಒಪ್ಪಂದ: ಮೇ 5ರಂದು ಯಪಿಎ-ಸಿಪಿಐ ಸಭೆ
ಹಣದುಬ್ಬರ: ಬಿಜೆಪಿಯೊಂದಿಗೆ ಕೈಜೋಡಿಸಲು ಸಿಪಿಐ ನಕಾರ
ಒಬಿಸಿ ಮೀಸಲಾತಿ: ಕೆನಪದರಕ್ಕೆ ಸರಕಾರದ ಖೋಕ್