ರಾಜ್ಯದ ಪೂರ್ವ ಭಾಗ ಮತ್ತು ಬುಂದೇಲ್ಕಂಡ್ ಪ್ರದೇಶದ ಅಭಿವೃದ್ಧಿಗಾಗಿ ಸರಕಾರ ವಿಶೇಷ ಆರ್ಥಿಕ ಪ್ಯಾಕೇಜ್ ನೀಡದಿದ್ದರೆ ಹಾಗೂ ಮೂರು ತಿಂಗಳೊಳಗೆ ಹಣದುಬ್ಬರ ನಿಯಂತ್ರಣವಾಗದಿದ್ದರೆ, ಕೇಂದ್ರ ಸರಕಾರದಿಂದ ತಮ್ಮ ಬೆಂಬಲ ಹಿಂಪಡೆಯುವುದಾಗಿ ಮತ್ತೊಮ್ಮೆ ಬೆದರಿಕೆ ಹಾಕಿದರು.
ರಾಹುಲ್ ಗಾಂಧಿ ಮತ್ತು ಕೇಂದ್ರ ಸರಕಾರದ ಮೇಲಿನ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ರಾಜಕೀಯ ನಾಟಕವನ್ನು ನಿಲ್ಲಿಸುವಂತೆ ರಾಹುಲ್ ಗಾಂಧಿಗೆ ಕರೆ ನೀಡಿದ್ದು, ಯುಪಿಎ ಸಮ್ಮಿಶ್ರ ಸರಕಾರದಿಂದ ಬೆಂಬಲ ಹಿಂಪಡೆಯುವ ತಮ್ಮ ಬೆದರಿಕೆಯನ್ನು ಪುನರುಚ್ಚರಿಸಿದ್ದಾರೆ.
ಬುಂಡೇಲ್ಕಂಡ್ ಪ್ರದೇಶದ ಝಾನ್ಸಿಯಲ್ಲಿ ರಾಹುಲ್ ಧರಣಿ ನಡೆಸಿದ ಒಂದು ದಿನದ ಬಳಿಕ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ಇತ್ತೀಚಿಗಿನ ಉಪಚುನಾವಣೆಯಲ್ಲಿನ ಕಾಂಗ್ರೆಸ್ ಸೋಲನ್ನು ಮರೆಮಾಚುವ ನಿಟ್ಟಿನಲ್ಲಿ ರಾಜಕೀಯ ನಾಟಕ ಮಾಡುವ ಬದಲಾಗಿ ರಾಜ್ಯದ ಓರ್ವ ಸಂಸದರಾಗಿ ಉತ್ತರ ಪ್ರದೇಶಕ್ಕಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜನ್ನು ಅನುಷ್ಠಾನಗೊಳಿಸುವಲ್ಲಿ ಪ್ರಯತ್ನಿಸಬೇಕು ಎಂದು ರಾಹುಲ್‌ಗೆ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಅನುವಂಶಿಕವಾಗಿ ರಾಜಕೀಯ ಶಕ್ತಿಯನ್ನು ಪಡೆದಿದ್ದು, ರಾಜಕೀಯವನ್ನು ಅರಿತಿಲ್ಲ ಎಂದು ಹೇಳಿದರು. ಪ್ರಸಕ್ತ ಹಣದುಬ್ಬರ ಜನರನ್ನು ಬಹುವಾಗಿ ಕಾಡುತ್ತಿದ್ದು, ಆ ವಿಷಯವಾಗಿ ಕೇಂದ್ರ ಸರಕಾರ ಯಾವುದೇ ಸಮಯದಲ್ಲಿ ಕೆಳಕ್ಕೆ ಬೀಳುವ ಸಾಧ್ಯತೆ ಇದೆ ಎಂಬುದನ್ನು ರಾಹುಲ್ ಮರೆತಿದ್ದಾರೆ ಎಂದು ತಿಳಿಸಿದರು.
|