ನಂದಿಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಸಿಪಿಎಂ ಕಾರ್ಯಕರ್ತರು ಮತ್ತು ಭೂಮಿ ಉಚ್ಚೇದ್ ಪ್ರತಿರೋಧ ಸಮಿತಿಯ ಸದಸ್ಯರ ನಡುವೆ ಹೊಸ ಘರ್ಷಣೆ ಉದ್ಭವಿಸಿದ್ದು, ಕನಿಷ್ಠ 8 ಮಂದಿ ಭೂಮಿ ಉಚ್ಚೇದ್ ಸಮಿತಿಯ ಸದಸ್ಯರು ಗಾಯಗೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ, ತೃಣಮೂಲ ಬ್ಲಾಕ್ ನಾಯಕ ಮತ್ತು ಭೂ ಸ್ವಾಧೀನ ವಿರೋಧಿ ವೇದಿಕೆ ಸಂಚಾಲಕ ಅಬು ತೆಹೆರ್, ನಂದಿಗ್ರಾಮದ ಅಧಿಕಾರಿಪಾರಾ ಗ್ರಾಮದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸಿಪಿಎಂ ಈ ಆರೋಪಗಳನ್ನು ನಿರಾಕರಿಸಿದೆ. ತಮ್ಮ ಸಹಾನುಭೂತಿಗಾರರ ಮನೆಗಳ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ದಾಳಿ ಮಾಡಿದ ಬಳಿಕ ಈ ಘರ್ಷಣೆ ಉದ್ಭವಿಸಿದೆ. ಅವರು ನಂದಿಗ್ರಾಮದಲ್ಲಿ ಜನಬೆಂಬಲ ಕಳೆದುಕೊಂಡಿದ್ದು, ಈ ಆರೋಪಗಳು ಗಮನಸೆಳೆಯುವ ತಂತ್ರವಾಗಿದೆ ಎಂದು ಸ್ಥಳೀಯ ಸಿಪಿಎಂ ನಾಯಕ ಅಶೋಕ್ ಗುರಿಯಾ ತಿಳಿಸಿದ್ದಾರೆ.
|