ಕಳೆದ ಐದು ದಿನಗಳಿಂದ ಮುಷ್ಕರ ಹೂಡಿದ್ದ ಮಹಾರಾಷ್ಟ್ರ ಸ್ಥಾನಿಕ ವೈದ್ಯರ ಸಂಘಟನೆ( ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್) ಭಾನುವಾರ ಮುಷ್ಕರವನ್ನು ಹಿಂತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಸ್ಥಾನಿಕ ವೈದ್ಯರ ಸಂಘಟನೆ ( ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್) ಭಾನುವಾರ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಸುಮಾರು 2000 ಸ್ಥಾನಿಕ ವೈದ್ಯರು ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೂಂಡಿದ್ದರು.
ಮೆಡಿಕಲ್ ಕಾಲೇಜುಗಳಲ್ಲಿನ ಪೋಸ್ಟ್ ಗ್ರ್ಯಾಜುಯೇಶನ್ ಸೀಟುಗಳನ್ನು (ವಾರ್ಷಿಕ 653ಸೀಟುಗಳನ್ನು 411ಕ್ಕೆ ಇಳಿಕೆ) ಕಡಿತಗೊಳಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಸರಕಾರಿ ನಿಯಂತ್ರಿತ ಆಸ್ಪತ್ರೆಗಳ ವೈದ್ಯರು ಮುಷ್ಕರ ಆರಂಭಿಸಿದ್ದರು. ರಾಜ್ಯ ಸರಕಾರ ವೈದ್ಯರ ಸೀಟುಗಳಲ್ಲಿ ಕಡಿತಗೊಳಿಸಿರುವುದನ್ನು ವಿರೋಧಿಸಿ, ವೈದ್ಯ ಸಂಘಟನೆ ತೀವ್ರ ಮುಷ್ಕರಕ್ಕೆ ಇಳಿದಿತ್ತು. ಇದರಿಂದಾಗಿ ರೋಗಿಗಳು, ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿದ್ದ ರೋಗಿಗಳು ತೊಂದರೆ ಅನುಭವಿಸುವಂತಾಗಿತ್ತು.
ಪ್ರತಿಭಟನೆಯಲ್ಲಿ ತೊಡಗಿದ್ದ ನಾಗ್ಪುರ್ ಆಸ್ಪತ್ರೆಯ ಸುಮಾರು 100 ವೈದ್ಯರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಪ್ರಕರಣದ ಕುರಿತು ವೈದ್ಯರುಗಳು ಶನಿವಾರದಂದು ರಾಜ್ಯ ಉನ್ನತ ಶಿಕ್ಷಣ ಸಚಿವ ದಿಲೀಪ್ ವಾಲ್ಸೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಅಲ್ಲದೇ ಮೆಡಿಕಲ್ ಕಾಲೇಜುಗಳಲ್ಲಿನ ಸೀಟುಗಳನ್ನು ಮತ್ತೆ ಹೆಚ್ಚಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ದೀಲಿಪ್ ವಾಲ್ಸೆ ಪಾಟೀಲ್ ಭರವಸೆ ನೀಡಿದರು.
|