ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಘಡ್ಕರಿ, ಮುಂಡೆಗೆ ಬಿಜೆಪಿಯ ತುರ್ತು ಸಮನ್ಸ್
ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕ ಗೋಪಿನಾಥ್ ಮುಂಡೆ ಅವರು ಪಕ್ಷದ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯಿಂದ ಆಘಾತಕ್ಕೆ ಒಳಗಾಗಿರುವ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ಮಹಾರಾಷ್ಟ್ರದಲ್ಲಿನ ನಾಯಕರ ಸಹಿತ ಮುಂಡೆ ವಿರುದ್ಧ ತಿರುಗಿ ಬಿದ್ದಿರುವ ನಿತೀನ್ ಘಢ್ಕರಿ ಅವರನ್ನು ಮಾತುಕತೆಗೆ ನವದೆಹಲಿಗೆ ಆಗಮಿಸಿದ್ದಾರೆ.

ಮುಂಬೈ ಘಟಕದ ಪ್ರಮುಖ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆಭಿನ್ನಮತ ವ್ಯಕ್ತಪಡಿಸಿರುವ ಮುಂಡೆ ಅವರು ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಈ ಮೂಲಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ನಿತೀನ್ ಘಡ್ಕರಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಎಲ್. ಕೆ ಆಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು ಒಟ್ಟಿಗೆ ಸಭೆ ಸೇರಿ ಮಾತುಕತೆ ನಡೆಸಿದ್ದು, ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಪರಿಹರಿಸುವುದಾಗಿ ಹೇಳಿದ್ದಾರೆ.

ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿರುವ ರಾಜ್‌ನಾಥ್ ಸಿಂಗ್ ಅವರು, ಉಭಯ ನಾಯಕರು ಆಗಾಗ ನವದೆಹಲಿಗೆ ಒಟ್ಟಿಗೆ ಆಗಮಿಸುವುದು ಸಹಜ ಎಂದಿದ್ದಾರೆ. ವಿಧಾನ ಮಂಡಳ ಸದಸ್ಯ ಮಧು ಚವ್ಹಾನ್ ಅವರನ್ನು ಮುಂಬೈ ಘಟಕದ ಅಧ್ಯಕ್ಷರು ಎಂದು ಘಡ್ಕರಿ ನೇಮಕ ಮಾಡಿದ ಕಾರಣ ಮುಂಡೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ.
ಮತ್ತಷ್ಟು
ಬೆಲೆ ಎರಿಕೆ:ತೃಣಮೂಲದಿಂದ ಬಂಗಾಳ ಬಂದ್‌
ಉ.ಪ್ರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಲಾಕಪ್ ಡೆತ್
ಮಹಾರಾಷ್ಟ್ರ ವೈದ್ಯರ ಮುಷ್ಕರ ಹಿಂದಕ್ಕೆ
'ಕಲಾಂರಿಂದ ಸೋನಿಯಾಗೆ ಆಹ್ವಾನ ನೀಡಲಾಗಿತ್ತು'
ವೇತನ ಆಯೋಗದ ವರದಿ ಜಾರಿಗೆ ಚಿದು ಅಸ್ತು
ನಂದಿಗ್ರಾಮ: ಘರ್ಷಣೆಯಲ್ಲಿ 8 ಮಂದಿಗೆ ಗಾಯ