ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ: ಬಿಸಿಲ ಬೇಗೆಯಿಂದ 22 ಸಾವು
ಭುವನೇಶ್ವರ: ಬಿಸಿಲ ಝಳದಿಂದ ಬಳಲಿದ ಸುಮಾರು 22 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಒರಿಸ್ಸಾದಿಂದ ವರದಿಯಾಗಿದೆ. ಸುಡುಸುಡು ಬಿಸಿನಿಂದಾಗಿ ಮಾನವರು ಹಾಗೂ ಪ್ರಾಣಿಗಳು ನೀರಿಲ್ಲದ ಹಾಹಾಕಾರ ಅನುಭವಿಸುವಂತಾಗಿದೆ. ಶಾಲೆಗಳಿಗೆ ಬೇಸಿಗೆಯ ರಜೆ ಸಾರಲಾಗಿದ್ದರೆ, ಅಲ್ಲದೇ ಕೂಲಿ ಕಾರ್ಮಿಕರು ಬೆಳಗ್ಗಿನ ಹೊತ್ತು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಒರಿಸ್ಸಾದಾದ್ಯಂತ ಸಹಿಸಲಾರದ ಬಿಸಿಲಿನ ಬೇಗೆ ಕಾಡುತ್ತಿದ್ದು, ಈವರೆಗೆ ಸುಮಾರು 22 ಮಂದಿ ಅಸುನೀಗಿದ್ದಾರೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಲ್ಲಿನ ತಾಪಮಾನ 45ಡಿಗ್ರಿ ಸೆಲ್ಸಿಯಸ್ ದಾಟಿದ್ದು ಉರಿಬಿಸಿಲು ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಹವಾಮಾನ ತಂತ್ರಜ್ಞರು ತಿಳಿಸಿದ್ದಾರೆ. ಒರಿಸ್ಸಾದ ಕರಾವಳಿ ಮತ್ತು ನೈರುತ್ಯ ಭಾಗದಲ್ಲಿ ಒಣ ಹವೆಯಿದ್ದು ಪರಿಸ್ಥಿತಿ ತೀರಾ ಹದಗೆಟ್ಟಿರುವುದಾಗಿ ಭುವನೇಶ್ವರ್ ಹವಾಮಾನ ಇಲಾಖೆಯ ನಿರ್ದೇಶಕ ಎಸ್‌‌.ಸಿ. ಸಾಹು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಾಜ್ಯದಲ್ಲಿನ ಅತಿಯಾದ ಗಣಿಗಾರಿಕೆ ಮತ್ತು ಕಾಡುರಹಿತ ಪ್ರದೇಶಗಳಿಂದಾಗಿ ಬಿಸಿತಾಪಮಾನಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ದಶಕಗಳ ಹಿಂದೆಯೂ ಇದೇ ರೀತಿ ಬಿಸಿಲ ಬೇಗೆಯ ತಾಪಕ್ಕೆ 2000ಮಂದಿ ಬಲಿಯಾಗಿದ್ದರು, ಬಳಿಕ ಪ್ರಾಥಮಿಕ ಹಂತದಲ್ಲೇ ಈ ಕುರಿತು ಅರಿವು ಮೂಡಿಸುವ ಪ್ರಚಾರ ಕಾರ್ಯನಡೆಸಿ ಹೆಚ್ಚಿನ ಅನಾಹುತ ನಡೆಯುವುದನ್ನು ತಡೆಯಲಾಗಿತ್ತು.
ಮತ್ತಷ್ಟು
ಸಾಂಸ್ಥಿಕ ಸ್ಥಾನಗಳಿಗೆ ಮುಂಡೆ ರಾಜೀನಾಮೆ
ಸುಲಿಗೆ ಪ್ರಕರಣ : ಶಾಸಕ ಗಾವ್ಳಿ ಬಂಧನ
ಮುಂಬೈ: ಕಾಂಗ್ರೆಸ್ ಕಾರ್ಪೋರೇಟರ್ ಹತ್ಯೆ
ಹೊಸ ಕೃಷಿಸಾಲ ಮನ್ನಾ ಇಲ್ಲ: ಪವಾರ್
ಮಾಜಿ ರಾಜ್ಯಸಭಾ ಸದಸ್ಯೆ ಸರೋಜಿನಿ ಬಾಬರ್ ನಿಧನ
ಗವರ್ನರ್‌ ಹುದ್ದಗೆ ನಿವೃತ್ತ ಕಾರ್ಯದರ್ಶಿಗಳ ಲಾಬಿ