ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಡಾಯ ಎದ್ದ ಗೋಪಿನಾಥ್ ಮುಂಡೆ ದೆಹಲಿಯಲ್ಲಿ
ಪಕ್ಷದ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವ ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಡೆ, ಪಕ್ಷದ ವರಿಷ್ಠರೊಂದಿಗೆ ಮಾತುಕತೆಗಾಗಿ ದೆಹಲಿಗೆ ಆಗಮಿಸಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರದ ಮುಂದಿನ ಚುನಾವಣೆಯಲ್ಲಿ ಮುಂಡೆಯವರ ನೇತೃತ್ವದಲ್ಲೇ ಚುನಾವಣೆಗೆ ಸ್ಫರ್ಧಿಸುವುದಾಗಿ ಹೈಕಮಾಂಡ್ ಹೇಳಿದ್ದು, ಮುಂಡೆಯವರು ಒಂದಿಷ್ಟು ಮೆದುವಾದಂತೆ ಕಂಡು ಬಂದಿದ್ದಾರೆ.

ಬಿಜೆಪಿಯ ಅಭಿಪ್ರಾಯವನ್ನು ಬಾಳಅಪ್ಟೆಯವರು ಹೊರಗೆಡಹಿದ್ದು, ಇದು ಪಕ್ಷದ ಆಂತರಿಕ ವಿಚಾರವಾಗಿದ್ದು ಇದನ್ನು ಯುಕ್ತವಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

ಮಧು ಚವನ್‌ರನ್ನು ಮುಂಬೈ ಬಿಜೆಪಿ ಘಟಕದ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ತಮ್ಮನ್ನು ನಿರ್ಲಕ್ಷಿಸಲ್ಪಟ್ಟಿದ್ದಕ್ಕಾಗಿ 59 ವರ್ಷದ ಮುಂಡೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಎಲ್ಲಾ ಇತರ ಹುದ್ದೆಗಳಿಗೆ ನಿನ್ನೆ ತಮ್ಮ ರಾಜಿನಾಮೆ ನೀಡಿದ್ದರು.

ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಾಯಕತ್ವ ಮೇಲಿನ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಮ್ಮ ದೂರುಗಳು ಪರಿಹಾರವಾಗದಿದ್ದರೆ ಮುಂಡೆಯವರು ಈ ವಾರವೇ ತನ್ನ ವಿಧಾನಸಭಾ ಸ್ಥಾನಕ್ಕೂ ರಾಜಿನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಮುಂಬೈಯಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಅನೇಕ ಎಂಎಲ್ಎ‌ಗಳು ಮುಂಡೆ ಪರ ಬೆಂಬಲ ತೋರಿದ್ದಾರೆ. ಒಟ್ಟು 54 ಶಾಸಕರಲ್ಲಿ 50 ಮಂದಿ ಮುಂಡೆ ಪರವಾಗಿ ನಿಂತಿದ್ದಾರೆ ಎಂದು ಹೇಳಲಾಗಿತ್ತು.
ಮತ್ತಷ್ಟು
ಸಾಂಸ್ಥಿಕ ಸ್ಥಾನಗಳಿಗೆ ಮುಂಡೆ ರಾಜೀನಾಮೆ
ಸುಲಿಗೆ ಪ್ರಕರಣ : ಶಾಸಕ ಗಾವ್ಳಿ ಬಂಧನ
ಮುಂಬೈ: ಕಾಂಗ್ರೆಸ್ ಕಾರ್ಪೋರೇಟರ್ ಹತ್ಯೆ
ಹೊಸ ಕೃಷಿಸಾಲ ಮನ್ನಾ ಇಲ್ಲ: ಪವಾರ್
ಮಾಜಿ ರಾಜ್ಯಸಭಾ ಸದಸ್ಯೆ ಸರೋಜಿನಿ ಬಾಬರ್ ನಿಧನ
ಗವರ್ನರ್‌ ಹುದ್ದಗೆ ನಿವೃತ್ತ ಕಾರ್ಯದರ್ಶಿಗಳ ಲಾಬಿ