ನವದೆಹಲಿ: ಲಷ್ಕರೆ-ಇ-ತೋಯ್ಬಾ ಸೇರಿದಂತೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಷೇಧಿತ ಸಂಘಟನೆ ಸ್ಟೂಡೆಂಟ್ಸ್, ಇಸ್ಲಾಮಿಕ್ ಮೂವ್‌ಮೆಂಟ್ ಇಂಡಿಯಾಗೆ ಸಂಪರ್ಕರವಿದೆ ಎಂದು ಸರಕಾರ ಇಂದು ಹೇಳಿದೆ.
ಲೋಕ ಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ, ಗೃಹಇಲಾಖಾ ರಾಜ್ಯಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರು, ಹಲವಾರು ಪ್ರಕರಣಗಳ ತನಿಖೆ ವೇಳೆಗೆ ಈ ಸಂಪರ್ಕವು ಬೆಳಕಿಗೆ ಬಂದಿದೆ ಎಂದು ಹೇಳಿದರು.
2006ರಿಂದೀಚೆಗೆ ಸಿಮಿಯ 181 ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಬಂಧಿತರಾಗಿದ್ದು, ಅವರಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಪ್ರಚೋದನಕಾರಿ ಸಾಹಿತ್ಯ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂದಿತಲ್ಲಿ 128 ಮಂದಿಯನ್ನು ಮಧ್ಯಪ್ರದೇಶ ಒಂದರಿಂದಲೇ ಬಂಧಿಸಲಾಗಿದೆ ಎಂದು ಜೈಸ್ವಾಲ್ ತಿಳಿಸಿದರು.
ಇಂತಹ ಸಂಘಟನಗಳ ಚಟುವಟಿಕೆಗಳು, ಶಾಂತಿ, ಸೌಹಾರ್ದ ಮತ್ತು ರಾಷ್ಟ್ರದ ಭದ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇಂತ ಸಂಸ್ಥೆಗಳ ಮೇಲೆ ಕಾನೂನು ಜಾರಿ ಸಂಸ್ಥೆಗಳು ಕಟ್ಟುನಿಟ್ಟಿನ ನಿಗಾವಹಿಸಿವೆ ಎಂದು ತಿಳಿಸಿದರು.
|