ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಮೆಂಟ್, ಉಕ್ಕು ಉತ್ಪಾದಕ ಮೇಲೆ ಚಿದು ಕಿಡಿ
PTI
ಸಿಮೆಂಟ್ ಮತ್ತು ಉಕ್ಕು ಉತ್ಪಾದನಾಕಾರರ ಮೇಲೆ ಮತ್ತು ಹಿರಹಾಯ್ದಿರುವ ಹಣಕಾಸು ಸಚಿವ ಪಿ. ಚಿದಂಬರಂ ಈ ಉದ್ಯಮಗಳು ಕೂಟಗಳಂತೆ ವರ್ತಿಸುತ್ತಿವೆ ಎಂದು ಪುನರುಚ್ಚರಿಸಿದ್ದಾರೆ. ಹಣದುಬ್ಬರವದ ನಿಯಂತ್ರಣಕ್ಕಾಗಿ ಇವರನ್ನು ಹತ್ತಿಕ್ಕಲು ಸರಕಾರವು ಕಾನೂನು ಮತ್ತು ಅಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ತಮ್ಮ ದೃಷ್ಟಿಯಲ್ಲಿ ಸಿಮೆಂಟ್ ಮತ್ತು ಉಕ್ಕು ಉತ್ಪಾದಕರು ಕೂಟದಂತೆ ವರ್ತಿಸುತ್ತಿವೆ ಎಂದು ಅವರು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ನುಡಿದರು.

ಉದ್ಯಮಗಳು ಕೂಟಕಟ್ಟಿಕೊಂಡಿವೆ ಎಂಬ ಆರೋಪದ ಕುರಿತು ಎಂಆರ್‌ಟಿಪಿಸಿ ತನಿಖೆ ನಡೆಸುತ್ತಿದೆ ಎಂದು ನುಡಿದ ಅವರು, "ಸರಕಾರದಲ್ಲಿ ಲಭ್ಯವಿರುವ ಕಾನೂನು ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಮೂಲಕ ಪರಿಹಾರವನ್ನು ಎದುರು ನೋಡುತ್ತಿದ್ದೇವೆ" ಎಂದು ನುಡಿದ ಚಿದಂಬರಂ, ಈ ವಿಚಾರವಾಗಿ ಉಕ್ಕು ಮತ್ತು ಉದ್ಯಮ ಸಚಿವಾಲಯಗಳು ಉದ್ಯಮಗಳ ಜೊತೆ ಚರ್ಚಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಹಣದುಬ್ಬರವನ್ನು ನಿಯಂತ್ರಿಸುವುದೇ ಸರಕಾರದ ಪ್ರಮುಕ ಕಾರ್ಯಕ್ರಮವಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚು ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಲೆ ನಿಯಂತ್ರಣಕ್ಕೆ ಈಗಾಗಲೇ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವಾರ ಹಣದ ಶೇಕಡವಾರನ್ನು ಹೆಚ್ಚಿಸಿರುವುದು, ದೇಶತ ಇತರೇ ಬ್ಯಾಂಕ್‌ಗಳು ಪ್ರರಂಭಿಕ 50ಪಾಯಿಂಗಳನ್ನು ಪಡೆದು ಸುಮ್ಮನೆ ಕೂರುವಂತೆ ಮಾಡಿದೆ. ಆರ್‌ಬಿ ಐ ಕೈಗೊಂಡಿರುವ ಈ ನಿರ್ಧಾರದಿಂದ ಸರಕಾರಕ್ಕೆ ಒಳಿತಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ಚಿದಂಬರಂ ತಿಳಿಸಿದರು.

ಹಣದುಬ್ಬರ ನಿಯಂತ್ರಿಸಲು ತತ್‌ಕ್ಷಣದ ಪರಿಹಾರಗಳು ಇಲ್ಲ ಎಂದು ಒತ್ತಿ ಹೇಳಿದ ಅವರು, ಹಣಕಾಸು ಮತ್ತು ಆರ್ಥಿಕ ಕ್ರಮಗಳು ಪರಿಣಾಮ ಬೀರಲು ಕೆಲವು ಸಮಯ ಬೇಕಾಗುತ್ತದೆ ಎಂದು ನುಡಿದರು. ಹಣಕಾಸು ಸಚಿವಾಲಯ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಸೇರಿದಂತೆ ಇತರ ಸಚಿವಾಲಯಗಳ ನಡುವೆ ಹುಟ್ಟಿಕೊಂಡಿದೆ ಎಂದು ಹೇಳಲಾಗಿರುವ ಭಿನ್ನಾಭಿಪ್ರಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಯಾವುದೇ ಮನಸ್ತಾಪಗಳಿಲ್ಲ, 3-4 ಸಚಿವರು ಒಟ್ಟಿಗೆ ಸೇರಿದಾಗ ಈ ವಿಚಾರದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು
ಲಷ್ಕರೆಯೊಂದಿಗೆ ಸಿಮಿ ಸಂಪರ್ಕ
ಸಂಸತ್ತಿನಲ್ಲಿ ಬಿಎಸ್‌ಪಿ ಸಂಸದರ ಗದ್ದಲ
ಪ್ಯಾರಾಸಿಟಮಲ್ ಮಾತ್ರೆಯಿಂದ ತುಲಾಭಾರ
ಬಂಡಾಯ ಎದ್ದ ಗೋಪಿನಾಥ್ ಮುಂಡೆ ದೆಹಲಿಯಲ್ಲಿ
ಒರಿಸ್ಸಾ: ಬಿಸಿಲ ಬೇಗೆಯಿಂದ 22 ಸಾವು
ಸಾಂಸ್ಥಿಕ ಸ್ಥಾನಗಳಿಗೆ ಮುಂಡೆ ರಾಜೀನಾಮೆ