ಭಯೋತ್ಪಾದನಾ ಚಟುವಟಿಕೆಯ ಆರೋಪದ ಮೇಲೆ ಗಲ್ಲುಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಸರಬ್‌ಜಿತ್ ಸಿಂಗ್‌ನನ್ನು ಭೇಟಿ ಮಾಡಲು ಆತನ ಕುಟುಂಬ ಬುಧವಾರ ಪಾಕಿಸ್ತಾನಕ್ಕೆ ತಲುಪಿದೆ.
ಕಳೆದ 18 ವರ್ಷಗಳ ಸುದೀರ್ಘಾವಧಿಯ ಬಳಿಕ ಈ ಭೇಟಿ ನಡೆಯುತ್ತಿದೆ. ಸರಬ್‌ಜಿತ್ ಪತ್ನಿ, ಪುತ್ರಿ ಮತ್ತು ಅವರ ಸಹೋದರಿ ಮತ್ತು ಪತಿಯನ್ನೊಳಗೊಂಡ ತಂಡ ವಾಘಾ ಗಡಿಯ ಮೂಲಕ ಬುಧವಾರದಂದು ಪಾಕಿಸ್ತಾನಕ್ಕೆ ತಲುಪಿದೆ.ಲಾಹೋರಿನ ಕೋಟ್ ಲಾಕ್‌ಪತ್ ಜೈಲಿನಲ್ಲಿರುವ ಸರಬ್‌ಜಿತ್ ಅವರನ್ನು ಭೇಟಿಯಾಗಲಿದ್ದಾರೆ.
ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಸರಬ್‌ಜಿತ್ ಕುಟುಂಬ ಈ ಸಂದರ್ಭದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮತ್ತು ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
1990ರಲ್ಲಿ ನಡೆಸಲಾದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಸರಬ್‌ಜಿತ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು, ಇತ್ತೀಚೆಗಷ್ಟೇ ಭಾರತ ಸರಕಾರ ಮಾಡಿಕೊಂಡ ಮನವಿ ಮೇರೆಗೆ ಶಿಕ್ಷೆಯನ್ನು ಏಪ್ರಿಲ್ 30ಕ್ಕೆ ಮುಂದೂಡಲಾಗಿದೆ.
|