ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಯಾಣಿಸುತ್ತಿದ್ದ ವಿವಿಐಪಿ ವಿಮಾನವು ಕೆಳಗಿಳಿಯಲು ಕೆಲವೇ ನಿಮಿಷಗಳು ಉಳಿದಿವೆ ಎನ್ನುವಾಗ ವಿಮಾನ ನಿಲ್ದಾಣದ ರಾಡಾರ್‌ನಲ್ಲಿ ಗುರುತಿಸಲಾಗದಂತಹ ಸಂಕೇತಗಳು ಕಂಡಿದ್ದು ವಿಮಾನ ದಿಕ್ಕು ಬದಲಾಯಿಸಿದ ಘಟನೆ ಸಂಭವಿಸಿದೆ.
ಪ್ರಧಾನಿ ಸಿಂಗ್ ಅವರಿದ್ದ ವಿಮಾನ ವಿಮಾನ ನಿಲ್ದಾಣದಲ್ಲಿ ಇಳಿಯಲು ಕೆಲವೇ ನಿಮಿಷಗಳಿಗರುವಾಗ ವಿಮಾನ ನಿಲ್ದಾಣ ಅಧಿಕಾರಿಗಳು ರಾಡಾರ್‌ನಲ್ಲಿ ಗುರುತಿಸಲಾಗದಂತಹ ಸಂಕೇತಗಳನ್ನು ಕಂಡಿದ್ದಾರೆ.
ಪ್ರಧಾನಿಯವರು 2004ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅವರ ಭದ್ರತೆಯಲ್ಲಿ ಲೋಪ ಕಾಣುತ್ತಿರುವುದು ಇದು ಆರನೆ ಬಾರಿಯಾಗಿದೆ.
ಪ್ರಧಾನಿ ಕಚೇರಿಯ ಪಾರ್ಕಿಂಗ್ ಲಾಟ್‌ನಲ್ಲಿ ಸಹೋದ್ಯೋಗಿಯ ಬಂಧೂಕಿನಿಂದ ಅಕಸ್ಮಾತ್ ಗುಂಡುಹಾರಿದ್ದು ಪೊಲೀಸ್ ಪೇದೆಯೊಬ್ಬ ಗಾಯಗೊಂಡಿದ್ದ ಘಟನೆ ಇದೇ ಮಾರ್ಚ್ ತಿಂಗಳಲ್ಲಿ ಸಂಭವಿಸಿತ್ತು.
2007ರಲ್ಲಿ ಪ್ರಧಾನಿಯವರ ವಿಮಾನ ಹೊರಡಲು ಉದ್ಯುಕ್ತವಾಗಿದ್ದಾಗ, ಅದೇ ಹೆಲಿಪ್ಯಾಡಿನಲ್ಲಿ ವಿಮಾನವೊಂದು ಇಳಿದಿತ್ತು. 2007ರ ಜೂನ್ ತಿಂಗಳಲ್ಲಿ ಎಂಜೀನಿಯರ್ ಒಬ್ಬ ಪ್ರಧಾನಿಯವರ ನಿವಾಸಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿತ್ತು.
2006ರ ನವೆಂಬರ್‌ನಲ್ಲಿ ಕೇರಳಕ್ಕೆ ತೆರಳಿದ್ದಾಗ ಅವರ ಬೆಂಗಾವಲು ವಾಹವೊಂದು ತಪ್ಪು ಹಾದಿಯಲ್ಲಿ ತೆರಳಿತ್ತು. 2006ರ ಜುಲೈ ತಿಂಗಳಲ್ಲಿ ಇಬ್ಬರು ಯುವತಿಯರು ಮತ್ತು ಇನ್ನೋರ್ವ ವ್ಯಕ್ತಿ ಸಿಂಗ್ ಅವರ ಸಂಬಂಧಿಗಳೆಂದು ಹೇಳುತ್ತಾ ಪ್ರಧಾನಿ ನಿವಾಸದತ್ತ ಮುನ್ನುಗ್ಗಿದ್ದರು.
|