ತ್ರಿಶ್ಶೂರ್: ಮದವೇರಿದ ಆನೆಯ ಆಟೋಪದಿಂದಾಗಿ ಓರ್ವ ಮಹಿಳೆ ಸೇರಿದಂತೆ, ಮೂರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಇರಿಂಜಲಕುಡ ಕೂಡಮಾಣಿಕ್ಯ ದೇವಸ್ಥಾನದಲ್ಲಿ ಸಂಭವಿಸಿದೆ.
ದೇವಾಲಯದಲ್ಲಿ ಉತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಿರುವಲ್ಲ ಉನ್ನಿಕೃಷ್ಣನ್ ಎಂಬ ಹೆಸರಿನ ಆನೆಯನ್ನು ಕರೆತರಲಾಗಿತ್ತು.
ಮದವೇರಿದ್ದ ಆನೆ ನಿಯಂತ್ರಣ ತಪ್ಪಿ ಓಡಿದ ಕಾರಣ ಈ ದುರ್ಘಟನೆ ಸಂಭವಿಸಿದೆ. ಅಪರಾಹ್ನ ಕರ್ಚಶಿವೇಲಿ ಎಂಬ ಧಾರ್ಮಿಕ ವಿಧಿಯ ಬಳಿಕ ಈ ದುರ್ಘಟನೆ ಸಂಭವಿಸಿದೆ.
ಏತನ್ಮಧ್ಯೆ ಮದಗಜನಿಗೆ ಸಂಕೋಲೆ ತೊಡುವ ಪ್ರಯತ್ನ ನಡೆಸಲಾಗಿದೆ. ಅರಣ್ಯ ಇಲಾಖಾ ತಂಡ ಒಂದು ಆಗಮಿಸಿದ್ದು, ಆನೆಯ ನಿಯಂತ್ರಣಕ್ಕೆ ಮುಂದಾಗಿದೆ.
|