ರಾಷ್ಟ್ರೀಯ ಹೆದ್ದಾರಿಗಳು ಸಾಕಷ್ಟು ಸುರಕ್ಷವಾಗಿದೆ ಎಂಬ ಉತ್ತರ ನೀಡಿದ ಸಾರಿಗೆ ಸಚಿವರು ಪೇಚಿಗೆ ಸಿಲುಕಿದ ಪ್ರಸಂಗ ಬುಧವಾರ ಲೋಕಸಭೆಯಲ್ಲಿ ಸಂಭವಿಸಿತು.
ಪ್ರಶ್ನೋತ್ತರ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸುರಕ್ಷವಾಗಿದೆ ಎಂದುದೇ, ಪಕ್ಷಬೇಧ ಮರೆತು ಸದಸ್ಯರು ಇವರನ್ನು ತರಾಟೆಗೆ ತೆಗೆದುಕೊಳ್ಳಲು ಕಾರಣವಾಯಿತು.
ಸಂದಸದರು ತನ್ನ ಉತ್ತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ತನ್ನ ಉತ್ತರಕ್ಕೇ ಸಚಿವರು ಅಂಟಿಕೊಂಡಾಗ, ಮಧ್ಯಪ್ರವೇಶಿಸಿದ ಸ್ಪೀಕರ್ ಸೋಮನಾಥ್ ಚಟರ್ಜಿ, ರಸ್ತೆ ಸುರಕ್ಷ ಕ್ರಮಗಳು ಸಮರ್ಪಕವಾಗಿಲ್ಲ ಎಂಬ ಸದನದ ಕಾಳಜಿಯನ್ನು ಸಚಿವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದು ಈ ವಿಚಾರದತ್ತ ಗಮನ ಹರಿಸಲು 'ತಾಕೀತು' ಮಾಡಿದರು.
|