ರಾಜೀವ್ ಗಾಂಧಿ ಹತ್ಯೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ, ನಳಿಯನ್ನು ಪ್ರಿಯಾಂಕಾ ಗಾಂಧಿ ಜೈಲಿನಲ್ಲಿ ಭೇಟಿಯಾಗಿರುವುದು, ಗಾಂಧಿ ಕುಟುಂಬದ ಮಾನವೀಯ ಸ್ವಭಾವವನ್ನು ತೋರುತ್ತದೆ ಎಂದು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ.
ಕಳೆದ ತಿಂಗಳು ವೆಲ್ಲೂರು ಜೈಲಿನಲ್ಲಿ ಪ್ರಿಯಾಂಕ ನಳಿನಿಯನ್ನು ಭೇಟಿ ಮಾಡಿರುವುದು ಮತ್ತು ನಳಿನಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಸೋನಿಯಾ ಗಾಂಧಿ ಸಹಾಯ ಮಾಡಿರುವ ಕ್ರಮವನ್ನು ಪ್ರಸ್ತಾಪಿಸಿದ ಅವರು ಈ ಎಲ್ಲ ಕ್ರಮಗಳು ಗಾಂಧಿ ಕುಟುಂಬದ ಸದಸ್ಯರ ಮಾನವೀಯತೆಯನ್ನು ತೋರುತ್ತದೆ ಎಂದು ಹೇಳಿದ್ದಾರೆ.
"ಗಲ್ಲುಶಿಕ್ಷೆ ವಿಧಿಸಲಾಗಿದ್ದ ನಳಿನಿಯ ಮಗುವಿನ ಹಿತದೃಷ್ಟಿಯಿಂದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಸೋನಿಯಾ ಗಾಂಧಿ ಅರ್ಜಿ ಸಲ್ಲಿಸಿದ್ದರು" ಎಂಬುದಾಗಿ ತಮಿಳ್ನಾಡು ವಿಧಾನ ಸಭೆಯಲ್ಲಿ ಮಾತನಾಡುತ್ತಿದ್ದ ಕರುಣಾನಿಧಿ ನುಡಿದರು.
ಶಿಕ್ಷೆ ಅನುಭವಿಸುತ್ತಿದ್ದ ನಳಿನಿ ಜೈಲಿನಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಳು. ನಳಿನಿಯ ಪತಿ ಮುರುಗನ್‌ಗೂ ಸಹ ಗಲ್ಲುಶಿಕ್ಷೆ ವಿಧಿಸಾಗಿದೆ. ಸೋನಿಯಾ ಮನವಿಯಾಧಾರದಲ್ಲಿ ನಳಿನಿಯ ಗಲ್ಲುಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೊಂಡಲ್ಲಿ ಮುರುಗನ್ ಹಾಗೂ ಇತರ ಇಬ್ಬರ ಕ್ಷಮಾದಾನ ಅರ್ಜಿ ರಾಷ್ಟ್ರಪತಿಯವರ ಬಳಿ ಬಾಕಿಉಳಿದಿದೆ.
|