ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ ವಿರೋಧಿಸಿ ಸಂಸದರ ಮಾನವ ಸರಪಣಿ
ಬೆಲೆ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರಕಾರದ 'ವೈಫಲ್ಯ'ವನ್ನು ಪ್ರತಿಭಟಿಸಿ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ, ಎನ್‌ಡಿಎ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಮಾನವ ಸರಪಣಿ ನಿರ್ಮಿಸಿದರು.

ಯುಪಿಎ ಸರಕಾರದ ಆರ್ಥಿಕ ನೀತಿಗಳ ವಿರೋಧದ ಪ್ರದರ್ಶನಕ್ಕಾಗಿ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ, ಜೆಡಿ(ಯು), ಬಿಜೆಡಿ ಮತ್ತು ಅಕಾಲಿ ದಳದ ಸಂಸದರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿರೋಧ ಪಕ್ಷವು ಇದೀಗಾಗಲೆ ಮೇ 2ರಂದು ಮುಷ್ಕರಕ್ಕೆ ಕರೆ ನೀಡಿದೆ. "ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಅಗತ್ಯವಸ್ತುಗಳ ಬೆಲೆ ಏರಿದೆ. ಬೆಲೆ ಏರಿಕೆ ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ" ಎಂದು ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ದೂರಿದ್ದಾರೆ.

'ಬೆಲೆ ಏರಿಕೆಗೆ ಕಾಂಗ್ರೆಸ್, ಕಮ್ಯುನಿಸ್ಟ್ ಕಾರಣ', 'ಬೆಲೆಏರಿಕೆ ತಡೆಯಿರಿ ಇಲ್ಲ ತೊಲಗಿರಿ' ಮುಂತಾದ ಘೋಷಣೆಗಳುಳ್ಳ ಬ್ಯಾನರುಗಳನ್ನು ಸಂಸದರು ಪ್ರದರ್ಶಿಸಿದರು.

ಸಂಸದರಾದ ಜಸ್ವಂತ್ ಸಿಂಗ್, ಸುಷ್ಮಾ ಸ್ವರಾಜ್, ವಿ.ಕೆ.ಮಲ್ಹೋತ್ರಾ, ಹೇಮಮಾಲಿನಿ, ಜಾರ್ಜ್ ಫೆರ್ನಾಂಡಿಸ್, ಶರದ್ ಯಾದವ್, ಮತ್ತು ಶಿವಸೇನಾ ನಾಯಕ ಮನೋಹರ್ ಜೋಷಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮತ್ತಷ್ಟು
ಮದುವೆಯಿಂದ ಹಿಂತಿರುಗುವಾಗ ಮಸಣಕ್ಕೆ
'ಪ್ರಿಯಾಂಕ-ನಳಿನಿ ಭೇಟಿ ಮಾನವೀಯತೆಯ ಸಂಕೇತ'
ಬಾಲುವಿರುದ್ಧ ಹರಿಹಾಯ್ದ ಸಂಸದರು
ಮದಗಜನ ಆರ್ಭಟಕ್ಕೆ ಮೂವರು ಬಲಿ
ಅಮೆರಿಕದ ರಾಯಭಾರಿಯನ್ನು ಕರೆಸಿ: ಎಡಪಕ್ಷಗಳ ಆಗ್ರಹ
ಮತ್ತೊಮ್ಮೆ ಪ್ರಧಾನಿ ಭದ್ರತಾ ಉಲ್ಲಂಘನೆ