ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಬ್ಬರು ಹಿಜ್ಬುಲ್ ಉಗ್ರರು ಗುಂಡಿಗೆ ಬಲಿ
ಜಮ್ಮುವಿನ ಗೂರ್ ಪ್ರದೇಶದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಭದ್ರತಾಪಡೆಯ ಗುಂಡಿಗೆ ಬಲಿಯಾಗಿರುವುದಾಗಿ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ 58 ರಾಷ್ಟ್ರೀಯ ರೈಫಲ್ಸ್‌ನ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿರುವ ಇಬ್ಬರು ಉಗ್ರರು ಗೂಲ್ ಪ್ರದೇಶದ ಭೀಮದಸ ಎಂಬಲ್ಲಿ ಸಾವಿಗೀಡಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎಸ್.ಡಿ.ಗೋಸ್ವಾಮಿ ತಿಳಿಸಿದ್ದಾರೆ.

ಗುಂಡಿಗೆ ಬಲಿಯಾದ ಉಗ್ರರನ್ನು ಅಬು ಮತ್ತು ಬಾಬರ್ ಎಂದು ಗುರುತಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಜಮ್ಮುವಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಎರಡು ದಿನಗಳ ಭೇಟಿಗಾಗಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮತ್ತಷ್ಟು
ತಿಳುವಳಿಕಾ ಪತ್ರಕ್ಕೆ ಭಾರತ-ಮಲೇಷ್ಯಾ ಸಹಿ
ಸರಬ್‌ಜಿತ್ ಕ್ಷಮಾದಾನ ಅರ್ಜಿ ಬಾಕಿಯಿಲ್ಲ!
ಬೆಲೆ ಏರಿಕೆ ವಿರೋಧಿಸಿ ಸಂಸದರ ಮಾನವ ಸರಪಣಿ
ಮದುವೆಯಿಂದ ಹಿಂತಿರುಗುವಾಗ ಮಸಣಕ್ಕೆ
'ಪ್ರಿಯಾಂಕ-ನಳಿನಿ ಭೇಟಿ ಮಾನವೀಯತೆಯ ಸಂಕೇತ'
ಬಾಲುವಿರುದ್ಧ ಹರಿಹಾಯ್ದ ಸಂಸದರು