ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಲ್ಮುಖವಾದ ಹಣದುಬ್ಬರದ ದರ ಶೇ.7.33ಕ್ಕೆ
ನವದೆಹಲಿ: ಏಪ್ರಿಲ್ 12ಕ್ಕೆ ಅಂತ್ಯಗೊಂಡ ವಾರದ ವರದಿಯ ಆಧಾರದ ಪ್ರಕಾರ ಹಣದುಬ್ಬರ ಮತ್ತೆ ಏರಿಕೆ ಕಂಡಿದ್ದು, ಶೇ7.33 ದಾಖಲಿಸಿದೆ. ಈ ಏರಿಕೆಯು, ಏಪ್ರಿಲ್ 29ರಂದು ಆರ್‌ಬಿಐ ಘೋಷಿಸಲಿರುವ ವಾರ್ಷಿಕ ಸಾಲನೀತಿಯಲ್ಲಿ ಹಣದ ಪೂರೈಕೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಆರ್‌ಬಿಐ ಇದೀಗಾಗಲೇ ನಗದು ಮೀಸಲು ದರವನ್ನು ಏರಿಸಿದೆ. ಬ್ಯಾಂಕುಗಳು ಕೇಂದ್ರಿಯ ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಇರಿಸಲೇ ಬೇಕಾದ ಮೊತ್ತವನ್ನು ಶೇ.0.5ರಷ್ಟು ಏರಿಸಿತ್ತು. ಹಣದ ಪೂರೈಕೆಯನ್ನು ತಡೆಯುವ ಉದ್ದೇಶದಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಈ ಏರಿಕೆಯು ಏಪ್ರಿಲ್ 26 ಮತ್ತು ಮೇ10ರಂದು ಎರಡು ಹಂತದಲ್ಲಿ ಜಾರಿಯಾಗಲಿದೆ.

ಏಪ್ರಿಲ್ ಐದಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರವು ಶೇ.7.41ರಿಂದ 7.14ಕ್ಕಿಳಿದಿದ್ದು, ಕೊಂಚ ನೆಮ್ಮದಿ ನೀಡಿತ್ತಾದರೂ, ಇದೀಗ ಮತ್ತೆ ಏರಿಕೆ ಕಂಡಿರುವುದು ಕಳವಳಕಾರಿಯಾಗಿದೆ. ಕಳೆದ ವರ್ಷ ಈ ವೇಳೆಗೆ ಹಣದುಬ್ಬರ ಶೇ.6.34 ದಾಖಲಾಗಿತ್ತು.

ಬೆಲ್ಲ ಮತ್ತು ಮೀನು ಸೇರಿದಂತೆ ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರದ ಗೆರೆ ಮತ್ತೆ ಮೇಲ್ಮುಖ ಚಲನೆ ಮಾಡಿರುವುದಕ್ಕೆ ಕಾರಣವಾಗಿದೆ. ತರಕಾರಿ, ಧಾನ್ಯಗಳು ಮತ್ತು ವನಸ್ಪತಿ ಎಣ್ಣೆಗಳ ಬೆಲೆಯನ್ನು ಕಳೆದ ವಾರ ತಗ್ಗಿಸಲಾಗಿತ್ತು.

ಏತನ್ಮಧ್ಯೆ, ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಮಾಡಿರುವ ಎಡಪಕ್ಷಗಳು, ಬೆಲೆಏರಿಕೆಯನ್ನು ಕೂಡಲೇ ತಡೆಯಬೇಕು ಎಂದು ಒತ್ತಾಯಿಸಿವೆ.
ಮತ್ತಷ್ಟು
ಇಬ್ಬರು ಹಿಜ್ಬುಲ್ ಉಗ್ರರು ಗುಂಡಿಗೆ ಬಲಿ
ತಿಳುವಳಿಕಾ ಪತ್ರಕ್ಕೆ ಭಾರತ-ಮಲೇಷ್ಯಾ ಸಹಿ
ಸರಬ್‌ಜಿತ್ ಕ್ಷಮಾದಾನ ಅರ್ಜಿ ಬಾಕಿಯಿಲ್ಲ!
ಬೆಲೆ ಏರಿಕೆ ವಿರೋಧಿಸಿ ಸಂಸದರ ಮಾನವ ಸರಪಣಿ
ಮದುವೆಯಿಂದ ಹಿಂತಿರುಗುವಾಗ ಮಸಣಕ್ಕೆ
'ಪ್ರಿಯಾಂಕ-ನಳಿನಿ ಭೇಟಿ ಮಾನವೀಯತೆಯ ಸಂಕೇತ'