ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಪೊಲೀಸ್ ಆಯುಕ್ತರಿಗೆ ಬುಲಾವ್
ದೆಹಲಿಯ ಟ್ರಾಫಿಕ್ ಪೊಲೀಸನೊಬ್ಬ ಅಪ್ರಾಪ್ತ ವಯಸ್ಕ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಹಿನ್ನೆಲೆಯಲ್ಲಿ, ಮಹಿಳಾ ಸಬಲೀಕರಣದ ಸಂಸದೀಯ ಸಮಿತಿಯು, ನಗರದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಕುರಿತು ಚರ್ಚೆ ನಡೆಸಲು ದೆಹಲಿ ಪೊಲೀಸ್ ಆಯಕ್ತರಿಗೆ ಕರೆ ನೀಡಿದೆ.

ಕಾಂಗ್ರೆಸ್ ಸಂಸದೆ ಕೃಷ್ಣ ತಿರತ್ ನೈತೃತ್ವದ ಸಮಿತಿಯು, ದೆಹಲಿಯಲ್ಲಿ ಮಹಿಳೆಯರ ವಿರುದ್ಧ ಇತ್ತೀಚೆಗೆ ನಡೆದಿರುವ ದೌರ್ಜನ್ಯ ಪ್ರಕರಣಗಳು ಮತ್ತು ಈ ಕುರಿತು ಪೊಲೀಸರು ಕೈಗೊಂಡಿರುವ ಕ್ರಮದ ಕುರಿತು ಪೊಲೀಸ್ ಆಯುಕ್ತರಿಂದ ವಿಸ್ತೃತ ವರದಿಯನ್ನು ಕೇಳಿದೆ.

"ಇದು ಕಳವಳಕಾರಿ ವಿಚಾರವಾಗಿದ್ದು, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣವು ದಿನನಿತ್ಯವೆಂಬಂತೆ ದಾಖಲಾಗುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಯಾವುದಾದರೂ ಕ್ರಮ ಕೈಗೊಂಡಿದ್ದಾರೆಯೇ" ಎಂದು ವಿಚಾರಿಸಲು ಪೊಲೀಸ್ ಆಯುಕ್ತರಿಗೆ ಕರೆ ನೀಡಿರುವುದಾಗಿ ತಿರತ್ ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಮಹಿಳೆಯರ ವಿರುದ್ಧ ನಡೆದಿರುವ ಪ್ರಕರಣಗಳ ಸಂಖ್ಯೆ ಮತ್ತು ಅವುಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿವರವಾದ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಆಯುಕ್ತರಿಗೆ ಹೇಳಲಾಗಿದೆ ಎಂದು ತಿರತ್ ತಿಳಿಸಿದ್ದಾರೆ.
ಮತ್ತಷ್ಟು
ವೀರ್ಯ ಕಳ್ಳತನ: ವಿಚಿತ್ರವಾದರೂ ಸತ್ಯ!
ಬೆಲೆ ಏರಿಕೆಯ ಭೀತಿ ಹುಟ್ಟಿಸದಿರಿ: ಪ್ರಧಾನಿ
ಮೇಲ್ಮುಖವಾದ ಹಣದುಬ್ಬರದ ದರ ಶೇ.7.33ಕ್ಕೆ
ಇಬ್ಬರು ಹಿಜ್ಬುಲ್ ಉಗ್ರರು ಗುಂಡಿಗೆ ಬಲಿ
ತಿಳುವಳಿಕಾ ಪತ್ರಕ್ಕೆ ಭಾರತ-ಮಲೇಷ್ಯಾ ಸಹಿ
ಸರಬ್‌ಜಿತ್ ಕ್ಷಮಾದಾನ ಅರ್ಜಿ ಬಾಕಿಯಿಲ್ಲ!