ಪಾಕಿಸ್ತಾನದಲ್ಲಿ ಪ್ರಜಾತಾಂತ್ರಿಕವಾಗಿ ಚುನಾಯಿತಗೊಂಡಿರುವ ಸರಕಾರದೊಂದಿಗೆ ನವದೆಹಲಿಯು ತನ್ನ ಮಾತುಕತೆಯನ್ನು ಇನ್ನಷ್ಟು ಆಳವಾಗಿಸಲಿದೆ ಎಂಬ ಆಶಾವಾದವನ್ನು ಪ್ರಧಾನಿ ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿಯವರು, ನೆರೆಹೊರೆಯ ರಾಷ್ಟ್ರಗಳು 'ಹಳೆಯದನ್ನು ಹಿಂದಿಕ್ಕಿ' ಸುಳ್ಳು ಭಯ ಹಾಗೂ ಸಂಕುಚಿತ ಕಾರ್ಯಸೂಚಿಗಳನ್ನು ಬದಿಗಿಟ್ಟು ತುರ್ತಿನ ಪ್ರಜ್ಞೆಯಿಂದ ಮುನ್ನಡೆಯುವ ಅಗತ್ಯವಿದೆ ಎಂದು ನುಡಿದರು.
ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಪಾಕಿಸ್ತಾನಗಳು ಅಗಾಧ ಪ್ರಮಾಣದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
|