ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತ.ನಾ: ಅಕ್ರಮ ಬಂದೂಕು ಪ್ಯಾಕ್ಟರಿ ಪತ್ತೆ
ಇಲ್ಲಿಗೆ ಸಮೀಪದ ಪಚ್ಚಮಲೈ ಬೆಟ್ಟದಡಿಯ ಸರವಣಪುರಂ ಎಂಬಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಬಂದೂಕು ನಿರ್ಮಾಣ ಫ್ಯಾಕ್ಟರಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕ್ಷಿಪ್ರಕಾರ್ಯಾಚರಣೆ ನಡೆಸಿರುವ ಪೊಲೀಸರು ದೇವದಾಸ್ (47) ಎಂಬಾತನ್ನು ಬಂಧಿಸಿದ್ದು, ಸಿದ್ಧಗೊಂಡಿದ್ದ ಐದು ಗನ್ನುಗಳು ಮತ್ತು ಕೆಲವು ನಿರ್ಮಾಣ ಹಂತದಲ್ಲಿದ್ದ ಗನ್ನುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯು ಇಂದಹುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ 1997ರಲ್ಲಿ ಬಂಧನಕ್ಕೀಡಾಗಿದ್ದು, ಆತನ ವಿರುದ್ಧ ಪ್ರಕರಣವಿನ್ನು ಬಾಕಿಯಿದೆ.

ಉಗ್ರರು ಹಾಗೂ ನಕ್ಸಲೈಟ್‌ಗಳೊಂದಿಗೆ ಬಂಧಿತನ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಹಳೆಯದನ್ನು ಹಿಂದಿಕ್ಕಿ ಮುನ್ನಡೆಯೋಣ: ಪ್ರಧಾನಿ
ದೆಹಲಿ ಪೊಲೀಸ್ ಆಯುಕ್ತರಿಗೆ ಬುಲಾವ್
ವೀರ್ಯ ಕಳ್ಳತನ: ವಿಚಿತ್ರವಾದರೂ ಸತ್ಯ!
ಬೆಲೆ ಏರಿಕೆಯ ಭೀತಿ ಹುಟ್ಟಿಸದಿರಿ: ಪ್ರಧಾನಿ
ಮೇಲ್ಮುಖವಾದ ಹಣದುಬ್ಬರದ ದರ ಶೇ.7.33ಕ್ಕೆ
ಇಬ್ಬರು ಹಿಜ್ಬುಲ್ ಉಗ್ರರು ಗುಂಡಿಗೆ ಬಲಿ