ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಸ್ಕಾರ್ಲೆಟ್ ತಾಯಿ
ಪಣಜಿ: ಗೋವಾದ ಬೀಚೊಂದರಲ್ಲಿ ಸಾವಿಗೀಡಾಗಿರುವ ಸ್ಕಾರ್ಲೆಟ್ ಈಡನ್ ಕೀಲಿಂಗ್ ತಾಯಿ ಫಿಯೋನ ಶನಿವಾರ ಭಾರತಕ್ಕೆ ಆಗಮಿಸಲಿದ್ದಾರೆ.

"ಆಕೆಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲವು ವಿಚಾರಗಳನ್ನು ಚರ್ಚಿಸಬೇಕಾಗಿದೆ. ಮೂರನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಸ್ಕಾರ್ಲೆಟ್‌ಳ ದೇಹದ ಕೆಲವು ಅಂಗಾಗ ಕಾಣೆಯಾಗಿರುವ ವಿಚಾರದ ಕುರಿತೂ ಚರ್ಚಿಸಲಿದ್ದಾರೆ" ಎಂದು ಫಿಯೋನರ ವಕೀಲ ವಿಕ್ರಮ್ ವರ್ಮಾ ಹೇಳಿದ್ದಾರೆ.

ಗೋವಾದ ಜನಪ್ರಿಯ ಅಂಜುವ ಬೀಚ್‌ನಲ್ಲಿ, ಫೆ.18ರಂದು ಸ್ಕಾರ್ಲೆಟ್‌ಳಿಗೆ ಡ್ರಗ್ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಪರಿಣಾಮ ಆಕೆ ಸಾವಿಗೀಡಾಗಿದ್ದಾಳೆ ಎಂದು ದೂರಲಾಗಿದೆ.

ತನ್ನ ಪುತ್ರಿಯ ಸಾವು ಸಹಜ ಸಾವಲ್ಲ ಎನ್ನುತ್ತಿರುವ ಫಿಯೋನ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಸರಕಾರವು ನಾಪತ್ತೆಯಾಗಿರುವ ಅಂಗಾಂಶಗಳನ್ನು ಒಪ್ಪಿಸಲು ವಿಫಲವಾದಲ್ಲಿ, ಹೈಕೋರ್ಟಿಗೆ ತೆರಳವುದಾಗಿ ವರ್ಮಾ ಹೇಳಿದ್ದಾರೆ.
ಮತ್ತಷ್ಟು
ತ.ನಾ: ಅಕ್ರಮ ಬಂದೂಕು ಪ್ಯಾಕ್ಟರಿ ಪತ್ತೆ
ಹಳೆಯದನ್ನು ಹಿಂದಿಕ್ಕಿ ಮುನ್ನಡೆಯೋಣ: ಪ್ರಧಾನಿ
ದೆಹಲಿ ಪೊಲೀಸ್ ಆಯುಕ್ತರಿಗೆ ಬುಲಾವ್
ವೀರ್ಯ ಕಳ್ಳತನ: ವಿಚಿತ್ರವಾದರೂ ಸತ್ಯ!
ಬೆಲೆ ಏರಿಕೆಯ ಭೀತಿ ಹುಟ್ಟಿಸದಿರಿ: ಪ್ರಧಾನಿ
ಮೇಲ್ಮುಖವಾದ ಹಣದುಬ್ಬರದ ದರ ಶೇ.7.33ಕ್ಕೆ