ಮುಂಬೈ: "ಹಿಂದಿ ಮತ್ತು ಇಂಗ್ಲೀಷ್ ವಾಹಿನಿಗಳ ಕ್ಯಾಮಾರಮ್ಯಾನ್‌ಗಳು ದಯವಿಟ್ಟು ಕ್ಯಾಮಾರಾ ಆಫ್ ಮಾಡಿ. ನಾನು ಮರಾಠಿ ಮಾಧ್ಯಮದ ಬಳಿ ಮಾತನಾಡುವೆ. ಯಾಕೆಂದರೆ ಅವರು ಸಮಸ್ಯೆಯನ್ನು ಉತ್ತಮವಾಗಿ ಅರಿತುಕೊಳ್ಳುತ್ತಾರೆ" ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಹಣಕಾಸು ಸಚಿವ ಜಯಂತ್ ಪಾಟೀಲ್ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಸೈನ್‌ಬೋರ್ಡ್‌ಗಳು, ಹೋರ್ಡಿಂಗ್‌ಗಳು ಮತ್ತು ನಾಮಫಲಕಗಳು ದೇವನಾಗರಿ ಲಿಪಿಯಲ್ಲಿಯೇ ಇರಬೇಕು ಎಂದು ಅವರು ಹೇಳಿದ್ದಾರೆ. ಹೆಸರು ಇಂಗ್ಲೀಷ್‌ನಲ್ಲಿಯೇ ಇದ್ದರೂ ಲಿಪಿ ದೇವನಾಗರಿಯಾಗಿರಬೇಕು ಎಂಬುದು ಅವರ ಆದೇಶ.
ಇಷ್ಟಕ್ಕೂ ರೈಲ್ವೇ ನಿಲ್ದಾಣಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿರುವ ಎಲ್ಲಾ ಫಲಕಗಳು ದೇವನಾಗರಿ ಲಿಪಿಯಲ್ಲಿಯೇ ಇದ್ದರೂ ಇದ್ದಕ್ಕಿದ್ದಂತೆ ಈ ಹೇಳಿಕೆ ನೀಡಲು ಕಾರಣವೇನು ಎಂಬ ಪ್ರಶ್ನೆ ಉದ್ಭವಿಸಿದೆ. ವಿರೋಧ ಪಕ್ಷಗಳಿಂದ ಮರಾಠಿ ಮತಬ್ಯಾಂಕನ್ನು ಕಸಿಯುವುದಾ? ಕಾಲವೇ ಉತ್ತರಿಸಬೇಕು.
|