ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಂಗ ನಿಂದನೆ ರದ್ದತಿ ಅಸಾಧ್ಯ: ಸಿಜೆ
ತಿರುನಂತಪುರಂ : ನ್ಯಾಯಾಂಗ ನಿಂದನೆ ನಿಬಂಧನೆಗಳು ಇಲ್ಲದಿದ್ದರೆ ನ್ಯಾಯಾಂಗ ಆದೇಶಗಳು ಕೇವಲ ಕಾಗದಗಳ ಕಂತೆಯಾಗಲಿದೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ನ್ಯಾಯಾಲಯದ ತೀರ್ಪನ್ನು ಪಾಲಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹೇಳಿದ್ದಾರೆ.

"ನ್ಯಾಯಾಂಗ ನಿಂದನೆಯ ನಿಬಂಧನೆಗಳನ್ನು ತೆಗೆದು ಹಾಕಿದರೆ ನ್ಯಾಯಾಲಯ ತೀರ್ಪನ್ನು ಯಾರು ಪಾಲಿಸುತ್ತಾರೆ" ಎಂದು ಪ್ರಶ್ನಿಸಿದ ಅವರು, ಅದಿಲ್ಲದಿದ್ದರೆ ನ್ಯಾಯಾಂಗ ಆದೇಶಗಳು ಕೇವಲ ಕಾಗದಗಳ ಕಂತೆಯಾಗೇ ಉಳಿಯುವುದು ಎಂದು ಹೇಳಿದ್ದಾರೆ.

ಕೇರಳ ವಿಧಾನ ಸಭೆ ಸುವರ್ಣ ಮಹೋತ್ಸವ ಸಮಾರಂಭದ ಭಾಗವಾಗಿ ನಡೆದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ನಡುವಿನ ಸಂಬಂಧ ಕುರಿತ ವಿಚಾರ ಸಂಕಿರಣದಲ್ಲಿ ಬಾಲಕೃಷ್ಣನ್ ಅವರು ಮಾತನಾಡುತ್ತಿದ್ದರು.

ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆರೋಗ್ಯಪೂರ್ಣ ಟೀಕೆ ನಡೆಸ ಬಹುದು ಆದರೆ ಅದು ನ್ಯಾಯಾಂಗದ ಅಧಿಕಾರ ಮತ್ತು ಗೌರವಕ್ಕೆ ಚ್ಯುತಿ ತರಬಾರದು ಎಂದು ತಿಳಿ ಹೇಳಿದ್ದಾರೆ.
ಮತ್ತಷ್ಟು
ಹಿಂದಿ, ಇಂಗ್ಲೀಷ್ ಬೇಡ; ಮರಾಠಿ ಮಾತ್ರವಿರಲಿ
ಭಾರತಕ್ಕೆ ಸ್ಕಾರ್ಲೆಟ್ ತಾಯಿ
ತ.ನಾ: ಅಕ್ರಮ ಬಂದೂಕು ಪ್ಯಾಕ್ಟರಿ ಪತ್ತೆ
ಹಳೆಯದನ್ನು ಹಿಂದಿಕ್ಕಿ ಮುನ್ನಡೆಯೋಣ: ಪ್ರಧಾನಿ
ದೆಹಲಿ ಪೊಲೀಸ್ ಆಯುಕ್ತರಿಗೆ ಬುಲಾವ್
ವೀರ್ಯ ಕಳ್ಳತನ: ವಿಚಿತ್ರವಾದರೂ ಸತ್ಯ!