ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂವಿಧಾನದ ಆಶಯಕ್ಕೆ ದಕ್ಕೆ: ಆಡ್ವಾಣಿ
ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿ/ಪಂಗಡಗಳಿಗೆ ನೀಡುವ ಮಿಸಲಾತಿಯ ಪಟ್ಟಿಯಲ್ಲಿ ಸೇರಿಸುವ ಮೂಲಕ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರವು ಸಂವಿಧಾನದ ಮೂಲ ಆಶಯಕ್ಕೆ ದಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ವಿರೋಧ ಪಕ್ಷ ನಾಯಕ ಎಲ್. ಕೆ ಆಡ್ವಾಣಿ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿನ ವಿವಿಧ ಪರಿಶಿಷ್ಟ ಜಾತಿ/ ಪಂಗಡಗಳ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಜವಹಾರ್‌ಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅಳವಡಿಸಿದ್ದ ಸಂವಿಧಾನದಲ್ಲಿ ಎರಡು ಪ್ರಮುಖ ಅಂಶಗಳನ್ನು ಸಂವಿಧಾನದಿಂದ ತೆಗೆದು ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮನ್‌ಮೋಹನ್ ಸಿಂಗ್ ಸರಕಾರ ಮೊದಲ ಬಾರಿಗೆ ಜಾತಿ ಆಧಾರದಲ್ಲಿ ಮೀಸಲಾತಿಯನ್ನು ನೀಡಲು ಪ್ರಯತ್ನಿಸುತ್ತಿದೆ. ಮತ್ತು ಆ ಮೂಲಕ ದಲಿತ ಕ್ರಿಶ್ಚಿಯನ್ನರ ಮತ್ತು ಮುಸ್ಲಿಮರನ್ನು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಗುಂಪಿಗೆ ತುರುಕಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕೇರಳದಲ್ಲಿ 35 ಲಕ್ಷ ಎಸ್‌ಸಿ/ಎಸ್‌ಟಿ ಸಮುದಾಯದವರು ಇದ್ದು, ಈ ಮೀಸಲಾತಿ ವಿಭಾಗದಡಿ ಇನ್ನೂ 45 ಲಕ್ಷ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ತರುವ ಮೂಲಕ ಕಾಂಗ್ರೆಸ್ ಈ ಸಮುದಾಯದ ಮೇಲೆ ಹೆಚ್ಚುವರಿ ಹೊರೆ ಹೇರಲು ಇಚ್ಚಿಸುತ್ತಿದೆ ಎಂದು ವಿವರಿಸಿದರು.
ಮತ್ತಷ್ಟು
ನ್ಯಾಯಾಂಗ ನಿಂದನೆ ರದ್ದತಿ ಅಸಾಧ್ಯ: ಸಿಜೆ
ಹಿಂದಿ, ಇಂಗ್ಲೀಷ್ ಬೇಡ; ಮರಾಠಿ ಮಾತ್ರವಿರಲಿ
ಭಾರತಕ್ಕೆ ಸ್ಕಾರ್ಲೆಟ್ ತಾಯಿ
ತ.ನಾ: ಅಕ್ರಮ ಬಂದೂಕು ಪ್ಯಾಕ್ಟರಿ ಪತ್ತೆ
ಹಳೆಯದನ್ನು ಹಿಂದಿಕ್ಕಿ ಮುನ್ನಡೆಯೋಣ: ಪ್ರಧಾನಿ
ದೆಹಲಿ ಪೊಲೀಸ್ ಆಯುಕ್ತರಿಗೆ ಬುಲಾವ್