ದೆಹಲಿ ಸೇರಿದಂತೆ ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಬಿಸಿಲ ಬೇಗೆ ಮಿತಿ ಮೀರಿದ್ದು, ಶನಿವಾರದಂದು ದೆಹಲಿಯಲ್ಲಿ 41ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದ್ದರೆ, ರಾಜಸ್ಥಾನದಲ್ಲಿ 45ಡಿಗ್ರಿ ಸೆಲ್ಸಿಯಸ್, ಉತ್ತರ ಪ್ರದೇಶದಲ್ಲಿ ಬಿಸಿಲ ಬೇಗೆಗೆ ಇಬ್ಬರು ಬಲಿಯಾಗಿದ್ದು, ಜಾರ್ಖಂಡ್ ಮತ್ತು ಪಶ್ಚಿಮಬಂಗಾಳದಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ ಒರಿಸ್ಸಾದಲ್ಲಿಯೂ ಸೂರ್ಯನ ತಾಪ ತಾಳಲಾರದೆ ಏಳು ಮಂದಿ ಸಾವನ್ನಪ್ಪಿರುವುದಾಗಿ ವರದಿಯೊಂದು ತಿಳಿಸಿದ್ದು, ಗುಜರಾತ್‌ನಲ್ಲಿ ಸಾಮಾನ್ಯ ತಾಪಮಾನಕ್ಕಿಂತ 5ಡಿಗ್ರಿ ಸೆಲ್ಸಿಯಸ್ ಹೆಚ್ಚಳಗೊಂಡಿರುವುದಾಗಿ ಹವಾಮಾನ ಇಲಾಖಾ ಅಧಿಕಾರಿಗಳು ಘೋಷಿಸಿದ್ದಾರೆ.
ಅಂಡಮಾನ್ ಕರಾವಳಿ ಭಾಗದಲ್ಲಿ ಹವಾಮಾನದ ಕಡಿಮೆ ಒತ್ತಡದಿಂದಾಗಿ ಗುಜರಾತಿನ ವಿವಿಧ ಭಾಗಗಳಲ್ಲಿಯೂ ಇದೇ ರೀತಿ ಪರಿಸ್ಥಿತಿ ಮುಂದುವರಿದಿದ್ದು, ದೇಶದ ಪೂರ್ವಭಾಗಗಳಲ್ಲಿ ತಾಪಮಾನ ಹೆಚ್ಚಳಗೊಂಡಿರುವುದಾಗಿ ತಿಳಿಸಿದ್ದಾರೆ.
ಜಾರ್ಖಂಡ್‌ನ ಕೈಗಾರಿಕಾ ನಗರಿ ಬೋಕಾರೋದಲ್ಲಿ ಗರಿಷ್ಠ ತಾಪಮಾನ 45ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲುಗೊಂಡಿದ್ದು, ಮರುಭೂಮಿ ನಗರವಾದ ಬರ್ಮಾರ್‌ನಲ್ಲಿ 44.9ಡಿಗ್ರಿ ಸೆಲ್ಸಿಯಸ್, ವಾರಾಣಸಿ 44.5ಡಿಗ್ರಿ, ಅಹಮ್ಮದಾಬಾದ್ ಮತ್ತು ಗುಜರಾತ್‌ಗಳಲ್ಲಿ 43ಡಿಗ್ರಿ ತಾಪಮಾನ ದಾಖಲುಗೊಂಡಿದೆ.
ಪಂಜಾಬ್, ಹರಿಯಾಣ ಮತ್ತು ಚಂಡೀಗಢ್‌ಗಳಲ್ಲಿ ದಾಖಲೆ ಮಟ್ಟದ 40ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪ ದಾಖಲುಗೊಂಡಿರುವುದಾಗಿ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ
|