ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಕಕಾಲಕ್ಕೆ 10ಉಪಗ್ರಹಗಳ ಉಡಾವಣೆ
ಬಾಹ್ಯಾಕಾಶ ಇತಿಹಾಸದಲ್ಲಿ ಹೊಸದಾಖಲೆ ಬರೆದ ಭಾರತ
ಏಕಕಾಲಕ್ಕೆ 10 ಉಪಗ್ರಹಗಳನ್ನು ಒಂದೇ ವಾಹಕದಲ್ಲಿ ಬಾಹ್ಯಾಕಾಶಕ್ಕೆ ರವಾಸಿದ ದಾಖಲೆಯನ್ನು ಭಾರತ ಸೋಮವಾರ ಮುಂಜಾನೆ ಬರೆದಿದೆ.

ಭಾರತದ ಒಂದು ಮಿನಿ ಉಪಗ್ರಹ ಹಾಗೂ ಎಂಟು ವಿದೇಶಿ ನ್ಯಾನೋ ಉಪಗ್ರಹಗಳು ಮತ್ತು ಒಂದು ದೂರಸಂವೇದಿ ಉಪಗ್ರಹ ಕಾರ್ಟೋಸಾಟ್-2ಯನ್ನು ಹೊತ್ತ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್(ಪಿಎಸ್ಎಲ್‌ವಿ-ಸಿ9) ಅನ್ನು ಭಾರತೀಯ ಭಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಸೋಮವಾರ ಮುಂಜಾನೆ ಯಶಸ್ವಿಯಾಗಿ ಉಡ್ಡಯನ ಮಾಡಿದ್ದು, ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 230 ಟನ್ ತೂಕದ ಉಡ್ಡಯನ ವಾಹನವು 824 ಕೆಜಿ ತೂಕದ ಉಪಗ್ರಹಗಳನ್ನು ತನ್ನ ಉಡಿಯಲ್ಲಿರಿಸಿ ಕಕ್ಷೆಗೆ ಸೇರಿಸಿದೆ.

ಸತಿಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ ನಭೋಮಂಡಲಕ್ಕೆ ಯಶಸ್ವಿಯಾಗಿ ಉಡ್ಡಯನಗೊಳಿಸಲಾಯಿತು.

ಹತ್ತು ಉಪಗ್ರಹಗಳನ್ನು ಹಾರಿಸುವ ಇಸ್ರೋದ 35ವರ್ಷಗಳ ಕನಸು ಇದೀಗ ನನಸಾಗುವ ಮೂಲಕ ಇಸ್ರೋದ ಸಾಧನೆ ಪ್ರಪಂಚದ ವಿಜ್ಞಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಹತ್ತು ಉಪಗ್ರಹಗಳನ್ನು ಏಕಕಾಲಕ್ಕೆ ಆಕಾಶಕ್ಕೆ ಚಿಮ್ಮಿಸಿರುವ ಈ ಪ್ರಯೋಗವು ಪ್ರಪಂಚದಲ್ಲೇ ಪ್ರಥಮ ಯಶಸ್ವೀ ಪ್ರಯೋಗವಾಗಿದೆ. ಈ ಹಿಂದೆ ರಷ್ಯಾ ಎಂಟು ಉಪಗ್ರಹಗಳನ್ನು ಹಾರಿಸಿತ್ತು.

ಉಡ್ಡಯನ ಕಾರ್ಯದ ಕುರಿತು ತೃಪ್ತಿ ವ್ಯಕ್ತಪಡಿಸಿರುವ ಇಸ್ರೋ ಅಧ್ಯಕ್ಷ ಜಿ. ಮಾಧವನ್ ನಾಯರ್ ಎಲ್ಲ ಪರಿಮಿತಿಗಳೂ ಸೂಕ್ತವಾಗಿ ಕಾರ್ಯ ನಿರ್ವಹಿಸಿವೆ ಎಂದು ಹೇಳಿದ್ದಾರೆ.
ಮತ್ತಷ್ಟು
ಬಿಸಿಲ ಬೆಗೆಗೆ ಇಬ್ಬರ ಬಲಿ
ಸಂವಿಧಾನದ ಆಶಯಕ್ಕೆ ದಕ್ಕೆ: ಆಡ್ವಾಣಿ
ನ್ಯಾಯಾಂಗ ನಿಂದನೆ ರದ್ದತಿ ಅಸಾಧ್ಯ: ಸಿಜೆ
ಹಿಂದಿ, ಇಂಗ್ಲೀಷ್ ಬೇಡ; ಮರಾಠಿ ಮಾತ್ರವಿರಲಿ
ಭಾರತಕ್ಕೆ ಸ್ಕಾರ್ಲೆಟ್ ತಾಯಿ
ತ.ನಾ: ಅಕ್ರಮ ಬಂದೂಕು ಪ್ಯಾಕ್ಟರಿ ಪತ್ತೆ