ನಂದಿಗ್ರಾಮದಲ್ಲಿನ ಪರಿಸ್ಥಿತಿಯನ್ನು ಬುದ್ದದೇವ್ ಭಟ್ಟಾಚಾರ್ಜಿ ನಿಭಾಯಿಸಿದ ರೀತಿಯನ್ನು ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಪ್ರದೇಶದ ಜನತೆಯ ದುಃಖದಲ್ಲಿ ತಾನು ಭಾಗಿಯಾಗಿರುವುದಾಗಿ ಹೇಳಿದ್ದಾರೆ.
ನಂದಿಗ್ರಾಮದಲ್ಲಿ ಕಷ್ಟ, ದುಃಖ ಅನುಭವಿಸಿದ ಜನತೆಯೊಂದಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ರೈತರೊಂದಿಗೆ ತಾನು ಇರುವುದಾಗಿ ಅವರು ತಿಳಿಸಿದರು.
ಭಹರಾಮ್‌ಪುರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಅಸಮಾಧಾನ ಸೂಚಿಸಿದ್ದು, ಇದು ಸಂಭವಿಸಬಾರದಿತ್ತು ಮತ್ತು, ಕಾನೂನು ಸುವ್ಯವಸ್ಥೆಯ ನಿಭಾವಣೆಯಲ್ಲಿ ಪಕ್ಷಪಾತವಿರಬಾರದು ಎಂದು ನುಡಿದರು.
ಜನತೆಯ ವಿರುದ್ಧ ಇಲ್ಲಿ ಮತ್ತೆಮತ್ತೆ ಹಿಂಸಾಚಾರ ನಡೆದಿದೆ ಎಂದು ಕಾಂಗ್ರೆಸ್ ಪದಾಧಿಕಾರಿಗಳು ದೂರಿದ್ದಾರೆ ಎಂದು ನುಡಿದ ಸೋನಿಯಾ, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರವಿರ ಕೂಡದು ಎಂದು ಹೇಳಿದರು.
|