ನೆರೆಯ ಬಾಂಗ್ಲಾದೇಶದಲ್ಲಿ ಹಕ್ಕಿಜ್ವರವು ನಿಯಂತ್ರಣಕ್ಕೆ ಬಾರದಿರುವುದು ತ್ರಿಪುರಾದಲ್ಲಿ ಈ ಬಾಧೆಯ ಭೀತಿಯನ್ನು ಮುಂದುವರಿಸಿದೆ.
ರಾಜ್ಯದಲ್ಲಿ ಎಚ್5ಎನ್1 ವೈರಸ್ ಹಬ್ಬಿದ್ದು, ಪಕ್ಷಿವಧಾ ಕಾರ್ಯವು ಮುಂದುವರಿದಿದ್ದರೂ, ಬಾಂಗ್ಲಾದ ಹಕ್ಕಿಜ್ವರ ಪೀಡಿತ ಪ್ರದೇಶವು ಗಡಿಪ್ರದೇಶದ ಗ್ರಾಮಗಳಿಗೆ ಅತೀ ಸಮೀಪದಲ್ಲಿರುವ ಕಾರಣ ಪ್ರಯೋಜನವಾಗುತ್ತಿಲ್ಲ ಎಂದು ಪಶು ಸಂಪನ್ಮೂಲ ಇಲಾಖಾ ನಿರ್ದೇಶಕ ಆಶಿಶ್ ರಾಯ್ ಬರ್ಮನ್ ಹೇಳಿದ್ದಾರೆ.
ದಲಾಯ್ ಮತ್ತು ಸದರ್ ಉಪವಿಭಾಗಗಳಲ್ಲಿ ಈ ರೋಗ ಕಾಣಿಸಿಕೊಂಡಿರುವ ಗ್ರಾಮಗಳು, ಬಾಂಗ್ಲಾದೇಶದ ಗ್ರಾಮಗಳಿಗೆ ಅತಿ ಸಮೀಪವಾಗಿದೆ. ಬಾಂಗ್ಲಾದಲ್ಲಿಯೂ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ, ಇಲ್ಲಿ ಕೈಗೊಳ್ಳುವ ನಿಯಂತ್ರಣ ಕ್ರಮಗಳು ಫಲಿಸಲಾರವು ಎಂದು ಅವರು ಹೇಳಿದ್ದಾರೆ.
|