ನವದೆಹಲಿ: ವಿವಾದಾಸ್ಪದ ಸೇತುಸಮುದ್ರಂ ಯೋಜನೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಜನತಾಪಕ್ಷದ ಸುಬ್ರಮಣಿಯಂ ಸ್ವಾಮಿ ಅವರು ಮತ್ತು ಇತರ ಅರ್ಜಿದಾರರ ವಕೀಲರು, ಈ ಪ್ರಕರಣದ ವಿಚಾರಣೆಯು ಮೇ ಒಂದರಂದು ನಡೆಯಲಿದೆ ಎಂದು ಆದೇಶದಲ್ಲಿ ತಪ್ಪಾಗಿ ಕಾಣಿಸಿಕೊಂಡಿರುವ ಕಾರಣ ಗೊಂದಲ ಉಂಟಾಗಿದೆ ಎಂಬುದಾಗಿ ನಿವೇದಿಸಿಕೊಂಡಿರು. ಈ ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ಪ್ರಕರಣವನ್ನು ನಾಳೆಗೆ ಮುಂದೂಡಿತು.
ಪ್ರಕರಣವನ್ನು ಏಪ್ರಿಲ್ 30ರಂದು ವಿಚಾರಣೆಗಾಗಿ ಪಟ್ಟಿಮಾಡಲಾಗಿತ್ತು.
|