ನುಂಗಣ್ಣಗಳ ಬಗ್ಗೆ ಕೇಳಿದ್ದೀರಿ. ಅಂವ ನನ್ನ ಹಣ ನುಂಗಿದ, ಈ ಸರಕಾರಿ ಅಧಿಕಾರಿ ಸಖತ್ ನುಂಗ್ತಾನೆ ಅಂತೆಲ್ಲಾ ಹೇಳಿದ್ದನ್ನು ಕೇಳಿದ್ದೀರಿ. ವಸ್ತುಶಃ ಹಣ ನುಂಗಿದ ಪೊಲೀಸ್ ಅಧಿಕಾರಿಯೊಬ್ಬನ ಸುದ್ದಿಯಿದು.ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಪೊಲೀಸನೊಬ್ಬ, ತನ್ನ ಪಾಪಕೃತ್ಯದ ಸಾಕ್ಷಿ ನಾಶ ಮಾಡಬೇಕೆಂಬ ಉದ್ದೇಶದಿಂದ ಏನು ಮಾಡಬೇಕೂಂತ ತಿಳಿಯದೆ 500 ರೂಪಾಯಿಗಳ ಏಳೆಂಟು ನೋಟುಗಳನ್ನೇ ನುಂಗಿಬಿಟ್ಟ ಘಟನೆ ನಡೆದದ್ದು ಹೈದರಾಬಾದಿನಲ್ಲಿ.ಹೈದರಾಬಾದ್ ಸಮೀಪದ ಮೇದಿಪಟ್ಟಣಂ ಪ್ರದೇಶದ ಹುಮಾಯೂನ್ ನಗರ ಪೊಲೀಸ್ ಠಾಣೆಯಲ್ಲಿ ಇದು ನಡೆದಿದೆ.