ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸದರಿಗೆ ನೀತಿ ಸಂಹಿತೆ ಶಿಫಾರಸು
ಸಂಸದೀಯರ ದುರ್ವರ್ತನೆಗಳ ಉದಾಹರಣೆಗಳು ಹೆಚ್ಚುತ್ತಲೇ ಹೋಗುತ್ತಿರುವ ಹಿನ್ನೆಲೆಯಲ್ಲಿ, ಲೋಕಸಭಾ ಸಮಿತಿಯು ಸದಸ್ಯರ ನೀತಿ ಸಂಹಿತೆ ಕುರಿತ ಒಂದು ವಿಸ್ತಾರವಾದ ಚೌಕಟ್ಟಿಗೆ ಶಿಫಾರಸ್ಸು ಮಾಡಿದೆ. ಆದರೆ ಸಂಸದೀಯ ನಿಬಂಧನೆಗಳ ಕ್ರೋಢೀಕರಣವನ್ನು ತಳ್ಳಿಹಾಕಿದೆ.

ಸ್ವಾತಂತ್ರ್ಯೋತ್ತರದ ಕಾಲಘಟ್ಟದಲ್ಲಿ ಹಿತಾಸಕ್ತಿಗಳ ಅಭಿಪ್ರಾಯಬೇಧಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಸದಸ್ಯರ ಹಿತಾಸಕ್ತಿಗಳ ನೋಂದಣಿ ಮತ್ತು ಅಭಿಪ್ರಾಯಬೇಧಗಳ ನಿವಾರಣೆಗೆ ಮಾರ್ಗದರ್ಶಿ ಸೂತ್ರಗಳು ನೀತಿ ಸಂಹಿತೆಯಲ್ಲಿ ಸೇರಿವೆ.

ಹಿರಿಯ ಕಾಂಗ್ರೆಸ್ ಮುಖಂಡ ವಿ ಕಿಶೋರ್ ಚಂದ್ರ ದೇವೊ ನೇತೃತ್ವದ ವಿಶೇಷಾಧಿಕಾರದ ಸಮಿತಿ ಹಾಗೂ ಸದಸ್ಯರ ಅನುಚಿತ ವರ್ತನೆಯ ತನಿಖಾ ಸಮಿತಿಯು ಈ ವಿಚಾರಗಳ ಕುರಿತು ಅಧ್ಯಯನ ನಡೆಸಿದ್ದು, ಬುಧವಾರ ತನ್ನ ವರದಿಯನ್ನು ಸಲ್ಲಿಸಿದೆ.

ನಿಬಂಧನೆಗಳನ್ನು ಕಾಯಿದೆಯಾಗಿಸುವ ವಿಚಾರ ವಿರುದ್ಧ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸಂಸದೀಯ ವಿಶೇಷ ಸವಲತ್ತುಗಳು ಮತ್ತು ಅಸ್ತಿತ್ವದಲ್ಲಿರುವ ವಾಸ್ತವತೆಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.
ಮತ್ತಷ್ಟು
ಅಕ್ಷರಶಃ ಹಣ ನುಂಗುವ ಪೊಲೀಸ್ ಅಧಿಕಾರಿ!
ಶೀಘ್ರ ಬಿಡುಗಡೆ ಕೋರಿ ನಳಿನಿ ಅರ್ಜಿ
ಬಾಲಕಿಯನ್ನು ಬೆಂಕಿಗೆಸೆದ ಯುವಕ
ಸೇತುಸಮುದ್ರಂ ವಿಚಾರಣೆ ನಾಳೆಗೆ
ಕ್ರಿಮಿನಲ್‌ಗಳು ಚುನಾವಣಾ ಏಜೆಂಟರಾಗುವಂತಿಲ್ಲ
ಇರಾನ್ ಅಧ್ಯಕ್ಷ ಅಹಮ್ಮದಿನೆಜಾದ್ ಆಗಮನ