ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಲು ವಿಷಯದಲ್ಲಿ 'ಅಸಹಜ'ವಾದದ್ದೇನೂ ಮಾಡಿಲ್ಲ: ಪ್ರಧಾನಿ
ಹಡಗುಖಾತೆ ಸಟಿವ ಟಿ.ಆರ್.ಬಾಲು ಅವರ ಮೇಲಿನ ಭ್ರಷ್ಟಾಚಾರ ಆರೋಪದ ಕುರಿತು ಮೌನ ಮುರಿದಿರುವ ಪ್ರಧಾನಿ ಮನಮೋಹನ್ ಸಿಂಗ್, ಈ ಪ್ರಕರಣದಲ್ಲಿ 'ಅಸಹಜ'ವಾದುದನ್ನೇನನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಸಹಜವಾದುದೇನಿಲ್ಲ. ಸಚಿವ ಮುರಳಿ ದೇವೊರಾ ಅವರು ಸಂಸತ್ತಿನಲ್ಲಿ ಎಲ್ಲವನ್ನೂ ವಿವರಿಸಿದ್ದಾರೆ ಎಂದು ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಂಗ್ ನುಡಿದರು.

ಇದು ವಿವಾದದಿಂದ ತಮ್ಮನ್ನು ದೂರೀಕರಿಸಿಕೊಳ್ಳುವ ಯತ್ನವೇ ಎಂಬ ಪ್ರಶ್ನೆಗೆ ಕೆರಳಿದ ಅವರು, ನುಣುಚಿಕೊಳ್ಳಲು ಏನಿದೆ? ಎಂದು ಪ್ರಶ್ನಿಸಿದರು.

ಇದಕ್ಕೆ ಮೊದಲು, ಹಡಗುಖಾತೆ ಸಚಿವ ಟಿ.ಆರ್.ಬಾಲು ಅವರ ಕುಟುಂಬದ ಒಡೆತನದ ಕಂಪನಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ಸಚಿವಾಲಯವು ಯಾವುದೇ ರೀತಿಯ ಆದೇಶಗಳನ್ನೂ ನೀಡಿಲ್ಲ, ಆದರೆ ಬಾಲು ಪುತ್ರನ ಮನವಿ ಮೇರೆಗೆ, 'ಮಾಮೂಲಿಯಾಗಿ' ಕೆಲವೊಂದು ಉಲ್ಲೇಖಗಳನ್ನಷ್ಟೇ ಮಾಡಿತ್ತು ಎಂದು ರಾಜ್ಯಸಭೆಯಲ್ಲಿ ದೇವೊರಾ ಸ್ಪಷ್ಟಪಡಿಸಿದ್ದರು.
ಮತ್ತಷ್ಟು
ಗಾಂಧಿವಾದಿ ನಿರ್ಮಲಾ ದೇಶಪಾಂಡೆ ನಿಧನ
ಸಂಸದರಿಗೆ ನೀತಿ ಸಂಹಿತೆ ಶಿಫಾರಸು
ಅಕ್ಷರಶಃ ಹಣ ನುಂಗುವ ಪೊಲೀಸ್ ಅಧಿಕಾರಿ!
ಶೀಘ್ರ ಬಿಡುಗಡೆ ಕೋರಿ ನಳಿನಿ ಅರ್ಜಿ
ಬಾಲಕಿಯನ್ನು ಬೆಂಕಿಗೆಸೆದ ಯುವಕ
ಸೇತುಸಮುದ್ರಂ ವಿಚಾರಣೆ ನಾಳೆಗೆ