ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
32 ಸಂಸದರ ಹೆಸರು ಹಕ್ಕುಚ್ಯುತಿ ಸಮಿತಿಗೆ!
ಸದನದಲ್ಲಿ 'ದುರ್ವರ್ತನೆ' ತೋರಿದ 32ರಷ್ಟು ಲೋಕಸಭಾ ಸದಸ್ಯರ ಪ್ರಕರಣವನ್ನು ಸ್ಪೀಕರ್ ಸೋಮನಾಥ ಚಟರ್ಜಿ ಅವರು ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸುವ ಮೂಲಕ ಸಂಸದರ ಆಟಾಟೋಪಕ್ಕೆ ಚಾಟಿಯೇಟು ಬೀಸಿದ್ದಾರೆ.

ಸದನದಲ್ಲಿ ಪದೇ ಪದೇ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಸಂಸದರ ವಿರುದ್ಧ ಚಟರ್ಜಿ ಅವರು ಈ ಅಪರೂಪದ ಕ್ರಮ ಕೈಗೊಂಡಿದ್ದಾರೆ. ಏಪ್ರಿಲ್ 24ರಂದು ಸಭಾಧ್ಯಕ್ಷರನ್ನು ಗಣನೆಗೇ ತೆಗೆದುಕೊಳ್ಳದೆ ಈ ಸಂಸದರು ಸದನದ ವೇದಿಕೆಯತ್ತ ನುಗ್ಗಿ ಕೂಗಾಡಿದ್ದರು.

ಇವರಲ್ಲಿ ಹೆಚ್ಚಿನವರು ಪ್ರತಿಪಕ್ಷ ಸದಸ್ಯರು. ಬೆಲೆ ಏರಿಕೆ ವಿರುದ್ಧ ಆ ದಿನ ಎನ್‌ಡಿಎ ಸದಸ್ಯರು ತೀವ್ರವಾಗಿ ಪ್ರತಿಭಟಿಸುತ್ತಿದ್ದರು.

ಬಿಜೆಪಿಯ ಶಹನವಾಜ್ ಹುಸೇನ್, ಪಿ.ಎಸ್.ಗಧಾವಿ, ಎಂ.ಎ.ಖರಬೇಲಾ ಸ್ವೇಯ್ನ್, ಕಿಶನ್ ಸಿಂಗ್ ಸಂಗ್ವಾನ್ ಮತ್ತು ಕಿರಣ್ ಮಹೇಶ್ವರಿ, ಶಿವಸೇನೆಯ ಚಂದ್ರಕಾಂತ್ ಖೈರೆ, ಕಲ್ಪನಾ ರಮೇಶ್ ನರಹರಿ, ಶಿರೋಮಣಿ ಅಕಾಲಿದಳದ ರತನ್ ಸಿಂಗ್ ಅಜ್ನಾಲಾ, ಸುಖದೇವ್ ಸಿಂಗ್ ಲಿಬ್ರಾ, ಬಿಜೆಡಿಯ ತಥಾಗತ ಸತ್ಪಥಿ ಮತ್ತು ಬಿಎಸ್ಪಿಯ ಬ್ರಿಜೇಶ್ ಪಾಠಕ್ ಮುಂತಾದವರ ಹೆಸರು ಹಕ್ಕುಚ್ಯುತಿ ಸಮಿತಿಗೆ ಸಲ್ಲಿಸಿದ ಪಟ್ಟಿಯಲ್ಲಿದೆ.

ಬುಧವಾರವೂ ಚಟರ್ಜಿ ಅವರು ಸಂಸದರ ವರ್ತನೆಯಿಂದ ತೀವ್ರ ಬೇಸತ್ತಿದ್ದು, ಶೂನ್ಯ ವೇಳೆಯನ್ನು ಹಿಂಸಾ ವೇಳೆ ಎಂದು ಕರೆದಿದ್ದರು.
ಮತ್ತಷ್ಟು
ಬಾಲು ವಿಷಯದಲ್ಲಿ 'ಅಸಹಜ'ವಾದದ್ದೇನೂ ಮಾಡಿಲ್ಲ: ಪ್ರಧಾನಿ
ಗಾಂಧಿವಾದಿ ನಿರ್ಮಲಾ ದೇಶಪಾಂಡೆ ನಿಧನ
ಸಂಸದರಿಗೆ ನೀತಿ ಸಂಹಿತೆ ಶಿಫಾರಸು
ಅಕ್ಷರಶಃ ಹಣ ನುಂಗುವ ಪೊಲೀಸ್ ಅಧಿಕಾರಿ!
ಶೀಘ್ರ ಬಿಡುಗಡೆ ಕೋರಿ ನಳಿನಿ ಅರ್ಜಿ
ಬಾಲಕಿಯನ್ನು ಬೆಂಕಿಗೆಸೆದ ಯುವಕ