ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಐದನೆ ಬಾರಿಗೆ ತನ್ನ ಸಂಪುಟ ವಿಸ್ತರಣೆ ಮಾಡಿದ್ದು, ಇಬ್ಬರು ಹೊಸ ಸಚಿವರ ಸೇರ್ಪಡೆ ಮಾಡಿದ್ದಾರೆ. ಮತ್ತಿಬ್ಬರು ರಾಜ್ಯಸಚಿವರನ್ನು ಸಂಪುಟ ದರ್ಜೆಗೇರಿಸಲಾಗಿದೆ.
ರಾಜ್‌ಪಾಲ್ ತ್ಯಾಗಿ ಮತ್ತು ಸುಭಾಷ್ ಪಾಂಡೆ ಅವರ ಸೇರ್ಪಡೆಯೊಂದಿಗೆ ಸಂಪುಟ ಸದಸ್ಯರ ಸಂಖ್ಯೆ 54ಕ್ಕೇರಿದೆ. ಇವರಲ್ಲಿ 24 ಮಂದಿ ಸಂಪುಟ ದರ್ಜೆ ಸಚಿವರು.
ರಾಜಭವನ ಎದುರು ಗುರುವಾರ ಸಾಯಂಕಾಲ ನಡೆದ ಸರಳ ಸಮಾರಂಭದಲ್ಲಿ ಉತ್ತರ ಪ್ರದೇಶ ರಾಜ್ಯಪಾಲ, ಟಿವಿ ರಾಜೇಶ್ವರ್ ಅವರು ತ್ಯಾಗಿ ಹಾಗೂ ಪಾಂಡೆಯವರಿಗೆ ಗೌಪ್ಯತೆ ಮತ್ತು ಅಧಿಕಾರದ ಪ್ರಮಾಣವಚನ ಬೋಧಿಸಿದರು.
ತ್ಯಾಗಿ ಅವರು ಮೊರಾದ್‌ನಗರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದರೆ, ಪಾಂಡೆ ಜೈನಾಪುರದಿಂದ ಗೆದ್ದು ಬಂದಿದ್ದರು.
ಅರಣ್ಯ ಫತೇ ಬಹಾದೂರ್ ಸಿಂಗ್ ಹಾಗೂ ರಾಮ್ ಹೇತ್ ಅವರು ಅರಣ್ಯಹಾಗೂ ಚುನಾವಣಾ ಇಲಾಖೆಗಳ ರಾಜ್ಯಸಚಿವರಾಗಿದ್ದವರನ್ನು ಸಂಪುಟ ದರ್ಜೆಗೇರಿಸಲಾಗಿದೆ.
|