ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತಷ್ಟು ಉಬ್ಬರಿಸಿದ ಹಣದುಬ್ಬರ ಶೇ 7.57ಕ್ಕೆ
ಹಣದುಬ್ಬರವು ತನ್ನ ಮೇಲ್ಮುಖ ಚಲನೆಯನ್ನು ಮುಂದುವರಿಸಿದ್ದು, ಕಳೆದ 42 ತಿಂಗಳಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದೆ. ಏಪ್ರಿಲ್ 19ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರವು ಶೇ.7.57 ತಲುಪಿದೆ.

ತರಕಾರಿ, ಆಹಾರ ವಸ್ತುಗಳು, ಉಕ್ಕು ಮತ್ತು ಇತರ ಕೆಲವು ಇಂಧನ ವಸ್ತುಗಳ ಮೇಲಿನ ಬೆಲೆ ಏರಿಕೆಯು ಹಣದುಬ್ಬರ ಏರಿಕೆಗೆ ಕಾರಣವೆನ್ನಲಾಗಿದೆ.

ಹಣದುಬ್ಬರ ನಿಯಂತ್ರಣಕ್ಕೆ ಸರಕಾರ ಮತ್ತು ಆರ್‌ಬಿಐ ಯುದ್ಧೋಪಾದಿಯಲ್ಲಿ ಕಾರ್ಯಕೈಗೊಳ್ಳುತ್ತಿದ್ದರೂ, ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ.0.24ರಷ್ಟು ಏರಿಕೆ ಕಂಡಿದೆ. ಇದಕ್ಕೂ ಹಿಂದಿನ ವಾರದಲ್ಲಿ ಹಣದುಬ್ಬರ ದರ ಶೇ 7.33 ಆಗಿತ್ತು.

ಸರಕಾರವು ಕೈಗೊಂಡಿರುವ ಕಠಿಣ ಕ್ರಮಗಳಿಂದಾಗಿ, ಸುಮಾರು 6,300 ಕೋಟಿ ರೂಪಾಯಿ ಕಂದಾಯವನ್ನು ತ್ಯಾಗಮಾಡಲಾಗಿತ್ತು. ರಿಸರ್ವ್ ಬ್ಯಾಂಕು ನಗದು ಮೀಸಲು ದರವನ್ನೂ ಏರಿಸಿದೆ. ಇದರಿಂದಾಗಿ ಸುಮಾರು 27,500 ಕೋಟಿ ರೂಪಾಯಿಗಳ ಹಣದ ಹರಿವಿಗೆ ತಡೆಯೊಡ್ಡಿರುವಂತಾಗಿದೆ.

ಸರಕಾರ ಮತ್ತು ಆರ್‌ಬಿಐ ಕೈಗೊಂಡಿರುವ ಕ್ರಮಗಳು ಹಣದುಬ್ಬರ ಒತ್ತಡವನ್ನು ತಗ್ಗಿಸಲಿದೆ. ಭವಿಷ್ಯದಲ್ಲಿ ಈ ದರವು ಶೇ.5.5ರಷ್ಟಾಗಲಿದೆ ಎಂದು ಕ್ರಿಸಿಲ್ ಪ್ರಧಾನ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಷಿ ಪಿಟಿಐಗೆ ತಿಳಿಸಿದ್ದಾರೆ.

ಹಾಲು ಅಕ್ಕಿ ಮುಂತಾದ ಅವಶ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇವುಗಳ ಬೆಲೆಯಲ್ಲಿ ಶೇ ಒಂದರಷ್ಟು ಹೆಚ್ಚಾಗಿದ್ದರೆ, ತರಕಾರಿಗಳ ಬೆಲೆಯಲ್ಲಿ ಶೇ.0.3 ಕಡಿಮೆಯಾಗಿದೆ.

ಚಹದ ಬೆಲೆಯಲ್ಲಿ ಶೇ.17 ಹೆಚ್ಚಾಗಿದ್ದರೆ, ಕುರಿಮಾಂಸದಲ್ಲಿ ಶೇ.2 ಹಾಗೂ ಉಕ್ಕು ಉತ್ಪನ್ನಗಳ ಬೆಲೆ ಗಗನಕ್ಕೇರಿದ್ದು, ಶೇ. 51ರಷ್ಟು ಮೇಲಕ್ಕೇರಿದೆ. ಕಳೆದ ವರ್ಷ ಇದೇ ವೇಳೆಗೆ ಹಣದುಬ್ಬರ ಶೇ.6.07 ಆಗಿತ್ತು. 2004ರಲ್ಲಿ ನವೆಂಬರ್ 6ಕ್ಕೆ ಕೊನೆಗೊಂಡ ವಾರದಲ್ಲಿ ಶೇ.7.76ರ ಗರಿಷ್ಠ ಮಟ್ಟ ತಲುಪಿತ್ತು.

ಜಾಗತಿಕವಾಗಿ ಇಂಧನ ಬೆಲೆಗಳು ಮತ್ತು ಅಗತ್ಯವಸ್ತುಗಳ ಬೆಲೆ ಏರಿದ್ದು, ಆರ್‌ಬಿಐ ಪ್ರಸಕ್ತ ವರ್ಷದ ಸಮಾಧಾನಕರ ಹಣದುಬ್ಬರ ದರವನ್ನು ಶೇ.5.5 ಎಂದು ನಿಗದಿ ಮಾಡಿದೆ. ಕಳೆದ ವರ್ಷ ಅದು ಶೇ.5 ಎಂದು ನಿಗದಿ ಮಾಡಿತ್ತು.
ಮತ್ತಷ್ಟು
5ನೆ ಬಾರಿಗೆ ಮಾಯಾವತಿ ಸಂಪುಟ ವಿಸ್ತರಣೆ
ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಮುಷ್ಕರ
32 ಸಂಸದರ ಹೆಸರು ಹಕ್ಕುಚ್ಯುತಿ ಸಮಿತಿಗೆ!
ಬಾಲು ವಿಷಯದಲ್ಲಿ 'ಅಸಹಜ'ವಾದದ್ದೇನೂ ಮಾಡಿಲ್ಲ: ಪ್ರಧಾನಿ
ಗಾಂಧಿವಾದಿ ನಿರ್ಮಲಾ ದೇಶಪಾಂಡೆ ನಿಧನ
ಸಂಸದರಿಗೆ ನೀತಿ ಸಂಹಿತೆ ಶಿಫಾರಸು