ಏಪ್ರಿಲ್ 19ಕ್ಕೆ ಅಂತ್ಯಗೊಂಡ ವಾರದಲ್ಲಿ ಕಳೆದ 42 ತಿಂಗಳಲ್ಲೇ ಗರಿಷ್ಠ ಹಣದುಬ್ಬರ ದರ ಶೇ.7.57 ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಪಿ.ಚಿದಂಬರಂ, ಸರಕಾರದ ಮೇಲೆ ವಿಶ್ವಾಸವಿರಿಸುವಂತೆ ಮತ್ತು ತಾಳ್ಮೆಯಿಂದಿರುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಹಣದುಬ್ಬರವನ್ನು ತಡೆಯಲಾಗುವುದು. ತಾಳ್ಮೆ ಹಾಗೂ ವಿಶ್ವಾಸದಿಂದ ಇರಿ ಎಂಬುದೇ ತನ್ನ ಮನವಿಯಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ಏರಿಕೆಗೆ ಅಂತಾರಾಷ್ಟ್ರೀಯ ವಿದ್ಯಮಾನಗಳು ಕಾರಣ ಎಂದು ಅವರು ಹೇಳಿದ್ದಾರೆ.
ಹಣದುಬ್ಬರ ನಿಯಂತ್ರಣಕ್ಕೆ ಸರಕಾರ ಮತ್ತು ಆರ್‌ಬಿಐ ಯುದ್ಧೋಪಾದಿಯಲ್ಲಿ ಕಾರ್ಯಕೈಗೊಳ್ಳುತ್ತಿದ್ದರೂ, ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ.0.24ರಷ್ಟು ಏರಿಕೆ ಕಂಡಿದೆ. ಇದಕ್ಕೂ ಹಿಂದಿನ ವಾರದಲ್ಲಿ ಹಣದುಬ್ಬರ ದರ ಶೇ 7.33 ಆಗಿತ್ತು.
ಸರಕಾರವು ಕೈಗೊಂಡಿರುವ ಕಠಿಣ ಕ್ರಮಗಳಿಂದಾಗಿ, ಸುಮಾರು 6,300 ಕೋಟಿ ರೂಪಾಯಿ ಕಂದಾಯವನ್ನು ತ್ಯಾಗಮಾಡಲಾಗಿತ್ತು. ರಿಸರ್ವ್ ಬ್ಯಾಂಕು ನಗದು ಮೀಸಲು ದರವನ್ನೂ ಏರಿಸಿದೆ. ಇದರಿಂದಾಗಿ ಸುಮಾರು 27,500 ಕೋಟಿ ರೂಪಾಯಿಗಳ ಹಣದ ಹರಿವಿಗೆ ತಡೆಯೊಡ್ಡಿರುವಂತಾಗಿದೆ.
|