ಪ್ರಿಯಾಂಕ ಗಾಂಧಿ ಮಾರ್ಚ್ 29 ರಂದು ವೆಲ್ಲೂರು ಜೈಲಿನಲ್ಲಿ ಇರುವ ತಮ್ಮ ತಂದೆ ದಿ. ರಾಜೀವ್ ಗಾಂಧಿಯ ಕೊಲೆ ಆರೋಪಿ ನಳಿನಿ ಶ್ರೀಹರನ್‌ಳನ್ನು ಭೇಟಿಯಾಗಿದ್ದಾರೆ ಎಂದು ಏಪ್ರಿಲ್ 15 ರಂದು ಮಾಧ್ಯಮಗಳಲ್ಲಿ ವರದಿಯಾಗಿರವುದನ್ನು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯು ನಿರಾಕರಣೆಯ ಉತ್ತರ ನೀಡಿದೆ
ನಿಮಗೆ ಅಲ್ಲಿ ಏನಾಗಿದೆ ಎಂದು ತಿಳಿದಿದೆಯಾ?. ಮಾಹಿತಿ ಹಕ್ಕಿನ ಆಧಾರದಲ್ಲಿ ಯಾವುದನ್ನು ಕೋರಿದ್ದಾರೆ ಎಂದು ಗೊತ್ತಿದೆಯಾ?. ಹಾಗಿದ್ದರೆ ನಾವು ಅದನ್ನು ಪರೀಕ್ಷಿಸುತ್ತೇವೆ ಎಂದು ಎಐಸಿಸಿ ಯ ವಕ್ತಾರ ಅಭಿಷೇಕ್ ಸಿಂಘ್ವಿ ವರದಿಗಾರರಿಗೆ ಹೇಳಿಕೆ ನೀಡಿದ್ದಾರೆ.
ಪ್ರಿಯಾಂಕ ಗಾಂಧಿ ಮಾರ್ಚ್ 29 ರಂದು ವೆಲ್ಲೂರು ಜೈಲಿನಲ್ಲಿರುವ ಅವರ ತಂದೆಯ ಕೊಲೆಗಾರ್ತಿಯನ್ನು ಭೇಟಿಯಾಗಿದ್ದಾರೆ ಎಂದು ಮಾಹಿತಿ ಹಕ್ಕಿನ ಆಧಾರದಲ್ಲಿ ತಮಿಳುನಾಡಿನ ವಕೀಲರೋರ್ವರು ಪತ್ತೆ ಹಚ್ಚಿದ್ದರು. ಇದು ಎಪ್ರಿಲ್ 15ರಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತಲ್ಲದ, ದೇಶದಾದ್ಯಂತ ಇದರ ಕುರಿತು ಚರ್ಚೆಯಾಗಿತ್ತು. ಈ ಕುರಿತು ಕೇಳಿದ ಪ್ರಶ್ನೆಗೆ ಇದೀಗ ಕಾಂಗ್ರೆಸ್ ನಿರಾಕರಣೆಯ ಉತ್ತರವನ್ನು ನೀಡಿದ್ದಾರೆ.
|