ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೂ ವಿಮರ್ಶೆಯಲ್ಲಿ ಸರಬ್‌ಜಿತ್ : ಪಾಕ್
ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತೀಯ ಸರಬ್‌ಜಿತ್ ಸಿಂಗ್‌ಗೆ ಕ್ಷಮಾಧಾನ ನೀಡುವ ವಿಷಯ ಇನ್ನೂ ಪರಾಮರ್ಶೆಯಲ್ಲಿ ಇದ್ದು, ಉತ್ತಮ ನಿರ್ಣಯ ಹೊರಬರಲಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಶೆರ್ರಿ ರೆಹೆಮಾನ್ ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ರಾಜ್ಯ ಸಭಾ ಸದಸ್ಯರಾಗಿದ್ದ ದಿ.ನಿರ್ಮಲಾ ದೇಶಪಾಂಡೆಯವರ ಮರಣೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಹಮಾನ್, ಸರಬ್‌ಜಿತ್‌ನ ಸ್ಥಾನಮಾನಕ್ಕೆ ಅನುಗುಣವಾಗಿ, ವಿಮರ್ಶೆಯಡಿಯಲ್ಲಿ ಉತ್ತಮವಾದುದನ್ನು ಮಾಡುವ ಕುರಿತು ನಿರ್ಮಲಾ ದೇಶಪಾಂಡೆಯವರಿಗೆ ನಾವು ಹೇಳಿದ್ದವು ಎಂದು ನೆನಪಿಸಿದರು.

ದೇಶಪಾಂಡೆಯವರು ಹಲವು ಬಾರಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಶರಫ್ ಅವರಲ್ಲಿ ಸರಬ್‌ಜಿತ್ ವಿಷಯವನ್ನು ಅರುಹಿದ್ದರು. ಕಳೆದ 15 ದಿನಗಳ ಹಿಂದೆ ಮುಶ್ರಫ್ ಅವರು ಸರಬ್‌ಜಿತ್‌ನನ್ನು ನೇಣಿಗೇರಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ದೇಶಪಾಂಡೆಯವರ ನಿಕಟವರ್ತಿ ಶಿವಂತ್ ನುಡಿದದರು.
ಮತ್ತಷ್ಟು
ನಳಿನಿಯನ್ನು ಪ್ರಿಯಾಂಕ ಭೇಟಿ ಮಾಡಿಲ್ಲ: ಸಿಂಘ್ವಿ
ತಾಳ್ಮೆಯಿಂದಿರಲು ಜನತೆಗೆ ಚಿದು ಮನವಿ
ಆರ್‌ಟಿಐ ಕಾಯ್ದೆಯಡಿ ಸಂಸತ್ ಮಾಹಿತಿ ಸಲ್ಲ
ಮತ್ತಷ್ಟು ಉಬ್ಬರಿಸಿದ ಹಣದುಬ್ಬರ ಶೇ 7.57ಕ್ಕೆ
5ನೆ ಬಾರಿಗೆ ಮಾಯಾವತಿ ಸಂಪುಟ ವಿಸ್ತರಣೆ
ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಮುಷ್ಕರ