ಜಮ್ಮು ಕಾಶ್ಮೀರದ ಕಿಸ್ತಾವರ್ ಜಿಲ್ಲೆಯಲ್ಲಿ ಇಬ್ಬರು ಗ್ರಾಮಸ್ಥರನ್ನು ಉಗ್ರರು ಗುಂಡಿಕ್ಕಿ ಕೊಂದಿರುವ ಪ್ರಕರಣವನ್ನು ಜಮ್ಮಮತ್ತು ಕಾಶ್ಮೀರದ ಪೊಲೀಸರು ಶನಿವಾರ ವರದಿ ಮಾಡಿದ್ದಾರೆ.
ಜೆಲ್ಲೆಯ ಚಾತ್ರೂ ಪ್ರದೇಶದ ಕುಚಾಲ್ ಗ್ರಾಮದಲ್ಲಿ ಮಾಜಿ ಬಂಡುಕೋರನಾಗಿದ್ದ ಇಮ್ತಿಯಾಜ್ ಅಹಮದ್ ಎಂಬವನ್ನು ಗುಂಡಿಕ್ಕಿ ಕೊಲ್ಲಲಾಗಿದೆ, ಬಳಿಕ ಅದೇ ಗ್ರಾಮದಲ್ಲಿರುವ ಸಾರ್ವಜನಿಕ ಆರೋಗ್ಯ ಇಂಜಿನಿಯರ್ ಬಾಶಿರ್ ಅಹಮದ್ ಹಜಾಮ್-ಅನ್ ಎಂಬವರ ಮನೆಗೆ ನುಗ್ಗಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪೂಲೀಸರು ತಿಳಿಸಿದ್ದಾರೆ.
ಇಮ್ತಿಯಾಜ್ ಈ ಮೊದಲು ಉಗ್ರಗಾಮಿ ಚಟುವಟಿಕೆ ಮಾಡಿರುವುದಕ್ಕಾಗಿ 2006 ರಲ್ಲಿ ಬಂಧಿಯಾಗಿದ್ದು, 2008 ರ ಫೆಬ್ರವರಿ ಕೋರ್ಟ್ ಆತನನ್ನು ಬಿಡುಗಡೆ ಮಾಡಿತ್ತು.
ಇವರಿಬ್ಬರನ್ನೂ ಪೂಲೀಸ್ ಮಾಹಿತಿದಾರರೆಂಬ ಕುಂಟು ನೆಪದಿಂದ ಕೊಲೆ ಮಾಡಿದ್ದಾರೆ ಎಂದು ಪೂಲಿಸರು ಶಂಶಯ ವ್ಯಕ್ತಪಡಿಸಿದ್ದಾರೆ.
|