ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಹೇಳಿಕೆಗೆ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿರುವುದನ್ನು ಟೀಕಿಸಿರುವ ಬಿಜೆಪಿ ಈ ವಿಚಾರವನ್ನು ಸಂಸತ್ ಅಧಿವೇಶನದಲ್ಲಿ ಎತ್ತುವುದಾಗಿ ಹೇಳಿದೆ.
ಜಾಗತಿಕವಾಗಿ ಆಹಾರ ವಸ್ತುಗಳ ಬೆಲೆ ಏರಿಕೆಗೆ ಬುಶ್ ಭಾರತದ ಮೇಲೆ ಗೂಬೆ ಕೂರಿಸಿದ್ದರೂ, ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿರುವುದು ನಾಚಿಕೆಗೇಡು ಎಂದಿರುವ ಬಿಜೆಪಿ, ತನ್ನ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ಪ್ರಧಾನಿ ಎದ್ದು ನಿಲ್ಲಬೇಕು ಎಂದು ಹೇಳಿದೆ.
ಪ್ರಧಾನಿ ಮನಮೊಹನ್ ಸಿಂಗ್ ಒರ್ವ ಪ್ರತಿನಿಯೋಜಿತ ಅಧಿಕಾರಿಯಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರೀಯ ಹಾಗೂ ವಿದೇಶಿ ರಂಗಗಳಲ್ಲಿ ಸಿಂಗ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ದೂರಿದೆ. ಅವರು ಅಧಿಕಾರದಲ್ಲಿ ಇರುವುದು ಇನ್ನು ಕೆಲವೇ ದಿನಗಳು. ಕನಿಷ್ಠಪಕ್ಷ ಈಗಲಾದರೂ, ಅವರು ತನ್ನ ರಾಷ್ಟ್ರದ, ಗೌರವ ಮತ್ತು ಪ್ರತಿಷ್ಠೆಯನ್ನು ಕಾಪಾಡಲು ಎದ್ದು ನಿಲ್ಲಲಿ ಎಂದು ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದು ಬುಶ್ ಹೇಳಿಕೆಗೆ ಸೂಕ್ತ ಉತ್ತರ ನೀಡಲಿ ಎಂದು ಒತ್ತಾಯಿಸಿದ್ದಾರೆ.
|