ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಠಾತ್ ಲೋಕಸಭೆ ಮುಂದೂಡಿದ ಸ್ಪೀಕರ್
PTI
ಸದನದಲ್ಲಿ 'ದುರ್ವರ್ತನೆ' ತೋರಿದ 32ರಷ್ಟು ಲೋಕಸಭಾ ಸದಸ್ಯರ ಪ್ರಕರಣವನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿರುವ ಕ್ರಿಯೆಯ ಬೆನ್ನಿಗೆ ಸ್ಪೀಕರ್ ಲೋಕಸಭಾ ಸೋಮನಾಥ ಚಟರ್ಜಿ ಅವರು ಸೋಮವಾರ, ಅಧಿವೇಶನವನ್ನು ಹಠಾತ್ತನೆ ಮಧ್ಯಾಹ್ನ 2 ಗಂಟೆಯ ತನಕ ಮುಂದೂಡಿದರು.

ಶುಕ್ರವಾರ ಮೃತರಾದ ರಾಜ್ಯ ಸಭಾ ಸದಸ್ಯೆ ನಿರ್ಮಲಾ ದೇಶಪಾಂಡೆಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ತಕ್ಷಣವೇ ಸದನವನ್ನು ಎರಡು ಗಂಟೆಯ ತನಕ ಮುಂದೂಡಲಾಗಿದೆ ಎಂದು ಚಟರ್ಜಿ ಘೋಷಿಸಿದರು.

ಚಟರ್ಜಿಯವರ ಈ ಹಠಾತ್ ಕ್ರಮ, ವಿರೋಧ ಪಕ್ಷಗಳಿಗೆ, ಅದರಲ್ಲೂ ವಿಶೇಷವಾಗಿ ತುಟಿ ಮೇಲೆ ಬೆರಳಿಟ್ಟು ಕುಳಿತಿದ್ದ ಬಿಜೆಪಿಗೆ ತಕ್ಷಣಕ್ಕೆ ಅರಿವಾಗಲಿಲ್ಲ.

ಎನ್‌ಡಿಎ ಮೌನವ್ರತ
ಸದನದಲ್ಲಿ ದುರ್ವರ್ತನೆ ತೋರಿದ ಲೋಕಸಭಾ ಸದಸ್ಯರ ಪ್ರಕರಣವನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿರುವ ಸ್ಪೀಕರ್ ಅವರ ಕ್ರಮದ ಹಿನ್ನೆಲೆಯಲ್ಲಿ ಎನ್‌ಡಿಎ ತನ್ನ ಸದಸ್ಯರಿಗೆ ಸದನದಲ್ಲಿ ಮೌನವಾಗಿ ಇರುವಂತೆ ಸೂಚಿಸಿತ್ತು.

ಸಮಾಜವಾದಿ ಪಕ್ಷದ ನಾಯಕ ರಾಮ್‌ಜಿ ಲಾಲ್ ಸುಮನ್ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ, ಉತ್ತರ ಭಾರತೀಯರ ವಿರುದ್ಧ ಮಾಡಿರುವ ವಿವಾದಾಸ್ಪದ ಹೇಳಿಕೆ ವಿಚಾರ ಎತ್ತಲು ವಿನಂತಿಸುತ್ತಿರುವಂತೆಯೇ ಸಭಾಪತಿಯವರ ಘೋಷಣೆ ಹೊರಬಿದ್ದಿತು.
ಮತ್ತಷ್ಟು
ತಬಲಾ ವಾದಕ ಕಿಶನ್ ಮಹಾರಾಜ್ ಇನ್ನಿಲ್ಲ
ಕುಪ್ವಾರದಲ್ಲಿ ಉಗ್ರರ ಅಡಗುತಾಣ ಪತ್ತೆ
ಬುಶ್ ಹೇಳಿಕೆ: ಪ್ರಧಾನಿ ಮೌನಕ್ಕೆ ಟೀಕೆ
ಮತ್ತೆ ರಾಜ್ ಠಾಕ್ರೆ ಕೂಗಾಟ: 'ಮಹಾ' ಸರಕಾರ ಇಕ್ಕಟ್ಟಿನಲ್ಲಿ
ಮುಂಬೈ-ಪುಣೆ ಹೈವೇ ಅಪಘಾತ: 15 ಸಾವು
ಮತ್ತೆ ಉರಿಉರಿ ಭಾಷಣ ಮಾಡಿದ ರಾಜ್