ಸದನದಲ್ಲಿ 'ದುರ್ವರ್ತನೆ' ತೋರಿದ 32 ಲೋಕಸಭಾ ಸದಸ್ಯರ ಪ್ರಕರಣವನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿರುವುದನ್ನು, ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಸೋಮವಾರ ಹಿಂತೆಗೆದುಕೊಂಡಿದ್ದಾರೆ.
ಈ ವಿಷಯವನ್ನು ಮರು ಪರಿಗಣಿಸಲು ನಿರ್ಧರಿಸಿರುವುದಾಗಿ ಹೇಳಿದ ಸ್ಪೀಕರ್ ತಾನದನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಘೋಷಿಸುವ ಮೂಲಕ ಕಳೆದ ಆರು ದಿನಗಳ ವಿವಾದಕ್ಕೆ ತೆರೆ ಎಳೆದಂತಾಗಿದೆ.
ಕಳೆದ ಶುಕ್ರವಾರ ಸದನದಲ್ಲಿ ದುರ್ವರ್ತನೆ ತೋರಿದ 32 ಸದಸ್ಯರ ಪ್ರಕರಣವನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ಸೋಮನಾಥ ಚಟರ್ಜಿ ಶಿಫಾರಸ್ಸು ಮಾಡಿದ್ದರು.
ಬಿಜೆಪಿಯ ಶಹನವಾಜ್ ಹುಸೇನ್, ಪಿ.ಎಸ್.ಗಧಾವಿ, ಎಂ.ಎ.ಖರಬೇಲಾ ಸ್ವೇಯ್ನ್, ಕಿಶನ್ ಸಿಂಗ್ ಸಂಗ್ವಾನ್ ಮತ್ತು ಕಿರಣ್ ಮಹೇಶ್ವರಿ, ಶಿವಸೇನೆಯ ಚಂದ್ರಕಾಂತ್ ಖೈರೆ, ಕಲ್ಪನಾ ರಮೇಶ್ ನರಹರಿ, ಶಿರೋಮಣಿ ಅಕಾಲಿದಳದ ರತನ್ ಸಿಂಗ್ ಅಜ್ನಾಲಾ, ಸುಖದೇವ್ ಸಿಂಗ್ ಲಿಬ್ರಾ, ಬಿಜೆಡಿಯ ತಥಾಗತ ಸತ್ಪಥಿ ಮತ್ತು ಬಿಎಸ್ಪಿಯ ಬ್ರಿಜೇಶ್ ಪಾಠಕ್ ಮುಂತಾದವರ ಹೆಸರು ಹಕ್ಕುಚ್ಯುತಿ ಸಮಿತಿಗೆ ಸಲ್ಲಿಸಿದ ಪಟ್ಟಿಯಲ್ಲಿತ್ತು.
ಹಿಂದೆಂದೂ ನಡೆಯದಂತಹ ಸ್ಪೀಕರ್ ಅವರ ಕ್ರಮಕ್ಕೆ ಪ್ರತಿಯಾಗಿ ಸೋಮವಾರ ಎನ್‌ಡಿಯ ಸದಸ್ಯರು ಬಾಯಿಗೆ ಬೆರಳಿಟ್ಟು ಕುಳಿತುಕೊಳ್ಳುವ ಮೂಲಕ ಮೌನ ಮುಷ್ಕರ ಹೂಡಿದ್ದರು.
|