ಕುಖ್ಯಾತ ಶ್ರೀನಗರ ಲೈಂಗಿಕ ಹಗರಣದಲ್ಲಿ ಜಮ್ಮು ಕಾಶ್ಮೀರ ವಿಧಾನ ಸಭೆಯ ಸ್ಪೀಕರ್ ಆಗಿರುವ ಕೋರ್ ಕ್ಷೇತ್ರದ ಶಾಸಕ ತಾರಾ ಚಂದ್ ಭಾಗಿಯಾಗಿದ್ದರು ಎಂದು ರಾಜೌರಿ ಪೂಂಚ್ ಕ್ಷೇತ್ರದ ಕಾಂಗ್ರೆಸ್ ಸಂಸದ ಮದನ್ ಲಾಲ್ ಶರ್ಮಾ ಆರೋಪಿಸಿದ್ದಾರೆ.
ಡೋರಿ ಡಾಗೇರ್ ಎಂಬಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು "ಸಭಾಪತಿ ತಾರಾಚಂದ್ ಹಾಗೂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಪೀರ್‌ಝಾದ ಮೊಹಮ್ಮದ್ ಸಯೀದ್ ಅವರು ಈ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದರು ಎಂದು ಆಪಾದಿಸಿದ್ದಾರೆ. ಆದರೆ ಇದರಲ್ಲಿ ಸಿಲುಕಿ ಹಾಕಿಕೊಂಡಿರುವವರ ವಿರುದ್ಧ ಪಕ್ಷದ ನಾಯಕತ್ವವು ಕ್ರಮಕೈಗೊಳ್ಳಲಿದೆ ಎಂದವರು ನುಡಿದರು.
ಇವರಿಗೂ ಪಪ್ಪು ಯಾದವ್ ರೀತಿಯಲ್ಲಿ ಸುದೀರ್ಘ ಶಿಕ್ಷೆಯಾಗಲಿದೆ ಎಂದು ಅವರು ನುಡಿದರೆಂದು ಹೇಳಲಾಗಿದೆ.
ತಾರಚಂದ್ ವಿರುದ್ಧದ ಈ ಆಪಾದನೆ ಕುರಿತಂತೆ ಕಾಂಗ್ರೆಸ್ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
|