ಪರಮಾಣು ವಿಚಾರ ಸಂಬಂಧಿಸಿದಂತೆ ಯುಪಿಎ ಮತ್ತು ಎಡಪಕ್ಷಗಳ ಸಭೆಯ ಸಂದರ್ಭದಲ್ಲಿ, ಎಡಪಕ್ಷಗಳು ಎತ್ತುವ ಯಾವುದೇ ವಿಚಾರವನ್ನು ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ನಮ್ಮ ಸಹೋದ್ಯೋಗಿಗಳು ಪ್ರಸ್ತಾಪಿಸಲು ಇಚ್ಛಿಸುವಂತಹ ಯಾವುದೇ ವಿಚಾರವನ್ನು ಚರ್ಚಿಸಲು ನಾವು ಸಿದ್ಧ ಎಂದು ಅವರು ನಾಗರಿಕ ಪದವಿದೀಕ್ಷಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ಭಾರತ-ಅಮೆರಿಕ ಪರಮಾಣು ವಿಚಾರದ ಕುರಿತಂತೆ ಯುಪಿಎ ಮತ್ತು ಎಡಪಕ್ಷಗಳ ನಡುವೆ ಉದ್ಭವಿಸಿರುವ ಅಭಿಪ್ರಾಯ ಬೇಧಗಳನ್ನು ಪರಿಹರಿಸಲು ಮಂಗಳವಾರ ಸಭೆ ನಡೆಯಲಿದೆ. ಈ ವೇಳೆ ಸರಕಾರವು ಐಎಇಎಯೊಂದಿಗೆ ಭದ್ರತಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಹಿಹಾಕಬೇಕೆ ಬೇಡವೇ ಎಂಬುದನ್ನೂ ಚರ್ಚಿಸಲಾಗುವುದು.
|