ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ಸುತ್ತ ಭಟ್ಟಂಗಿಪಡೆ: ಸಂಸದ ರಾಜೀನಾಮೆ
ಕಾಂಗ್ರೆಸ್‌ಗೆ ಅಚ್ಚರಿಯ ಆಘಾತ ನೀಡಿರುವ ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರು, ಪಕ್ಷದ 'ಯುವರಾಜ' ರಾಹುಲ್ ಗಾಂಧಿ ಸುತ್ತಮುತ್ತಲಿರುವ 'ಭಟ್ಟಂಗಿ'ಗಳಿಂದಾಗಿ ಪಕ್ಷಕ್ಕೆ ಮತ್ತು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಉತ್ತರ ಪ್ರದೇಶದಿಂದ ರಾಜ್ಯಸಭೆ ಪ್ರವೇಶಿಸಿದ್ದ ಅಖಿಲೇಶ್ ಅವರನ್ನು ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನಾರಚನೆ ವೇಳೆ ಕೈಬಿಡಲಾಗಿತ್ತು. ಮಂಗಳವಾರ ರಾಜ್ಯಸಭೆ ಕಲಾಪ ಆರಂಭವಾದ ತಕ್ಷಣ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ನೇರವಾಗಿ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಅವರ ಬಳಿ ತೆರಳಿದ ಅಖಿಲೇಶ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. 'ನನಗೀಗ ಕಾಂಗ್ರೆಸ್ ಮೇಲಿನ ವಿಶ್ವಾಸ ಹೊರಟುಹೋಗಿದೆ' ಎಂದು ಹೇಳುವ ಮೂಲಕ ಅವರು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡಹಿದರು.

ಬಳಿಕ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಗೆ ಈಗಾಗಲೇ ರಾಜೀನಾಮೆ ಪತ್ರ ಕಳುಹಿಸಿದ್ದು, ಈಗ ನಾನು ನಿರಾಳವಾಗಿದ್ದೇನೆ ಎಂದು ಹೇಳಿದರು.

ರಾಹುಲ್ ವಿರುದ್ಧ ಕೆಂಡ ಕಾರಿದ ಅವರು, ಯುವರಾಜನ ಸುತ್ತಮುತ್ತ ಭಟ್ಟಂಗಿಗಳೇ ತುಂಬಿದ್ದಾರೆ. ಯಾರ ಬಗೆಗಾದರೂ ಈ ಭಟ್ಟಂಗಿಗಳಿಗೆ ಆಕ್ರೋಶವಿದ್ದರೆ, ಆ ವ್ಯಕ್ತಿ ಖಂಡಿತವಾಗಿಯೂ ಬಲಿಪಶುವಾಗಬೇಕಾಗುತ್ತದೆ ಎಂದರು.

ರಾಹುಲ್ ಅವರನ್ನು ಸಂಪರ್ಕಿಸಲು ಈ ಭಟ್ಟಂಗಿಗಳಿಗೆ ಮಾತ್ರವೇ ಅವಕಾಶವಿರುವುದು ತೀರಾ ದುರದೃಷ್ಟಕರ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬನಾರಸಿದಾಸ್ ಅವರ ಪುತ್ರ, ಕಳೆದ ತಿಂಗಳಲ್ಲಿ ಉಕ್ಕು ಖಾತೆ ರಾಜ್ಯ ಸಚಿವ ಸ್ಥಾನ ಕಳೆದುಕೊಂಡ ಅಖಿಲೇಶ್ ದಾಸ್ ನುಡಿದರು.
ಮತ್ತಷ್ಟು
ರಾಜ್ಯಸಭೆಯಲ್ಲಿ ಮಹಿಳಾ ಮಸೂದೆ ಮಂಡನೆ
ಮಧುರೈ: ನಾಚಿಗೇಡಿನ ಗೋಡೆಯ ಅವಸಾನ
ಎಡಪಕ್ಷಗಳ ಯಾವುದೇ ವಿಚಾರ ಚರ್ಚಿಸಲು ಸಿದ್ಧ: ಪ್ರಧಾನಿ
ಲೈಂಗಿಕ ಹಗರಣದಲ್ಲಿ ಜೆಕೆ ಸ್ಪೀಕರ್: ಕಾಂಗ್ರೆಸ್ ಎಂಪಿ ಆರೋಪ
ಶಿಫಾರಸ್ಸು ಹಿಂತೆಗೆದ ಸ್ಪೀಕರ್ ಚಟರ್ಜಿ
ಹಠಾತ್ ಲೋಕಸಭೆ ಮುಂದೂಡಿದ ಸ್ಪೀಕರ್